ತುಮಕೂರು: ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ತುಂಬಲು ಮಾತೃಭಾಷೆಯಿಂದ ಮಾತ್ರ ಸಾಧ್ಯ ಎಂದು ಲೇಖಕಿ ಬಾ.ಹ.ರಮಾಕುಮಾರಿ ಹೇಳಿದರು.
ನಗರದಲ್ಲಿ ಈಚೆಗೆ ಕಲಾ ಕಾಲೇಜಿನ ಸ್ನಾತಕ ಮಹಿಳಾ ವಿದ್ಯಾರ್ಥಿ ನಿಲಯದಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಶೈಕ್ಷಣಿಕ, ಉದ್ಯೋಗದ ಹಿತದೃಷ್ಟಿಯಿಂದ ಇತರೆ ಭಾಷೆ ಕಲಿಯಬೇಕು. ಅಂತರರಾಷ್ಟ್ರೀಯ ಸಂವಹನಕ್ಕೆ ಮಾತ್ರ ಇಂಗ್ಲಿಷ್ ಸೀಮಿತವಾಗಬೇಕು ಎಂದರು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ವಿದ್ಯೆ ಹೆಣ್ಣಿಗೆ ಗೌರವ, ಸಮಾನತೆ ಮತ್ತು ಉನ್ನತ ಸ್ಥಾನ ರೂಪಿಸಿಕೊಡುವ ಆಯುಧ. ಪ್ರೀತಿ, ಮದುವೆ ಎಂಬ ಮೋಹಕ್ಕೆ ಒಳಗಾಗದೆ, ಪೋಷಕರ ನಂಬಿಕೆ ಉಳಿಸಿಕೊಳ್ಳಬೇಕು. ಕಂಡ ಕನಸು ನನಸಾಗಿಸಿಕೊಳ್ಳಲು ಶ್ರಮವಹಿಸಿ’ ಎಂದು ಸಲಹೆ ಮಾಡಿದರು.
ವಿ.ವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶೇಟ್ ಎಂ.ಪ್ರಕಾಶ್, ಸಹ ಪ್ರಾಧ್ಯಾಪಕ ಜಿ.ರಾಮಕೃಷ್ಣ, ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಸಿ.ಎಂ.ರವಿ, ನಿಲಯಪಾಲಕಿ ಈ.ವನಜಾಕ್ಷಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.