ತೋವಿನಕೆರೆ: ತುಮಕೂರು ತಾಲ್ಲೂಕು ಕೋರ ಹೋಬಳಿಗೆ ಸೇರಿದ ಮೂರು ಪಂಚಾಯಿತಿ ವಿವಿಧ ರೀತಿಯ ಅಭಿವೃದ್ಧಿ ಮಾಡುವ ಮೂಲಕ ಜಿಲ್ಲಾಮಟ್ಟದ ಪ್ರಶಸ್ತಿ ಪಡೆದಿವೆ.
ಚಿಕ್ಕ ತೋಟ್ಲುಕೆರೆ ಪಂಚಾಯಿತಿಯ ಪಾರಂಪರಿಕ ವೀರಗಲ್ಲು ಮತ್ತು ಶಾಸನಗಳ ಸಂರಕ್ಷಣ ಕಾಮಗಾರಿಗಾಗಿ ಹಾಗೂ ಅತ್ಯುತಮ ಸ್ವಚ್ಛತಾ ನಿರ್ವಹಣೆಗಾಗಿ ದೇವಲಾಪುರ, ಅತಿ ಹೆಚ್ಚು ತೆರಿಗೆ ಸಂಗ್ರಹಣೆಗಾಗಿ ಕೆಸ್ತೂರು ಪಂಚಾಯಿತಿಗಳು ಜಿಲ್ಲಾ ಗೌರವ ಪಡೆದಿವೆ.
ಕೆಸ್ತೂರು ಪಂಚಾಯಿತಿ 2024-25ನೇ ಸಾಲಿನಲ್ಲಿ ವಸೂಲಿಯಾಗಬೇಕಾದ ₹1 ಕೋಟಿ ತೆರಿಗೆಯಲ್ಲಿ ₹73 ಲಕ್ಷ ಹಣ ವಸೂಲಿ ಮಾಡಿದೆ.
ಕೋರ ಹೋಬಳಿಯ ಮೂರು ಪಂಚಾಯಿತಿಗಳಿಗೆ ಜಿಲ್ಲಾಮಟ್ಟದ ಗೌರವ ಸಿಕ್ಕಿರುವುದು ಸಂತೋಷದ ವಿಷಯ. ಕೆಸ್ತೂರು ಪಂಚಾಯಿತಿ ಸಾಧನೆಗೆ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಹಕಾರ, ಪಿಡಿಒ ಸೇರಿದಂತೆ ಸಿಬ್ಬಂದಿ ಶ್ರಮ, ಜನರ ಉತ್ಸಾಹದಿಂದ ಸಾಧನೆ ಮಾಡಲಾಯಿತು ಎನ್ನುತ್ತಾರೆ ಪಂಚಾಯಿತಿ ಸದಸ್ಯ ಕಿರಣ್ ಕೆ.ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.