ಶಿಡ್ಲಘಟ್ಟ: ಶಸ್ತ್ರಚಿಕಿತ್ಸೆ ಮೂಲಕ ರೋಗಪೀಡಿತ ಮೂತ್ರಪಿಂಡ ಹೊರತೆಗೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅಧಿಕೃತವಾಗಿ ದಾಖಲಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಡಾ.ಪುವ್ವಾಡ ಸಂದೀಪ್, ಈಗ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ತಮ್ಮದೆ ದಾಖಲೆಯನ್ನೇ ಮುರಿದಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮೂತ್ರ ವಿಭಾಗದ(ಯೂರಾಲಜಿ) ತಜ್ಞ ಮಳ್ಳೂರಿನ ಡಾ.ಪುವ್ವಾಡ ಸಂದೀಪ್ ಅವರ ನೇತೃತ್ವದ ವೈದ್ಯರ ತಂಡ, ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ರೋಗಿಯೊಬ್ಬರ ರೋಗಪೀಡಿತ 7.2 ಕೆ.ಜಿ ಗಾತ್ರದ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಹೊರತೆಗೆದಿದ್ದರು.
‘ರೆಟ್ರೊಪೆರಿಟೋನಿಯಲ್ ನೆಫ್ರೆಕ್ಟೊಮಿ’ ಶಸ್ತ್ರಚಿಕಿತ್ಸೆ ಮೂಲಕ ರೋಗಗ್ರಸ್ತ ಕಿಡ್ನಿಯನ್ನು ತೆಗೆದಿದ್ದು, ರೋಗಿಯೊಬ್ಬರ ದೇಹದಿಂದ ಹೊರತೆಗೆದ ಅತಿದೊಡ್ಡ ಕಿಡ್ನಿ (31 ಸೆ.ಮೀ ಉದ್ದ ಮತ್ತು 13 ಸೆ.ಮೀ ಅಗಲ) ಇದು ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪರಿಗಣಿಸಿದ್ದು, 2021 ರ ತನ್ನ ಪ್ರಕಟಣೆಯಲ್ಲಿ ಚಿತ್ರ ಸಮೇತ ಪ್ರಕಟಿಸುವುದಾಗಿ ತಿಳಿಸಿತ್ತು.
ಈಗ ಮಂಡ್ಯದ ರೈತನೊಬ್ಬರ ರೋಗಪೀಡಿತ 7.72 ಕೆ.ಜಿ ಗಾತ್ರದ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಹೊರತೆಗೆದಿದ್ದಾರೆ. ರೋಗಿಯೊಬ್ಬರ ದೇಹದಿಂದ ಹೊರತೆಗೆದ ಅತಿದೊಡ್ಡ ಕಿಡ್ನಿ (34 ಸೆ.ಮೀ ಉದ್ದ ಮತ್ತು 15 ಸೆ.ಮೀ ಅಗಲ) ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.