
ಕೊಡಿಗೇನಹಳ್ಳಿ: ‘ಹುಟ್ಟುವಾಗ ಪ್ರತಿ ಮಗುವು ವಿಶ್ವಮಾನವನೆ. ಬೆಳೆಯುತ್ತಾ ಅಲ್ಲಿನ ವಾತವರಣ ಆತನನ್ನು ಜಾತಿ-ಧರ್ಮಗಳಿಂದ ವಿಂಗಡಿಸಿ ಅಲ್ಪಮಾನವನನ್ನಾಗಿ ಮಾಡುತ್ತದೆ ಎಂಬುದು ಕುವೆಂಪುರವರ ಸಂದೇಶವಾಗಿತ್ತು. ಹಾಗಾಗಿ ಮನುಷ್ಯ ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ವಿಶ್ವಮಾನವನಾಗಿ ಬೆಳೆಯಬೇಕು’ ಎಂದು ಕಸಾಪ ಕಾರ್ಯದರ್ಶಿ ರಾಕೇಶ್ ವಂಗೋಲ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಕುವೆಂಪು ಜಯಂತಿಯಲ್ಲಿ ಮಾತನಾಡಿದರು.
‘ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರು ನಮ್ಮ ಕರುನಾಡಲ್ಲಿ ಜನಿಸಿದ್ದು ಕನ್ನಡಿಗರೆಲ್ಲರ ಪುಣ್ಯ. ಅಂತಹ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕನ್ನಡ ಸಾಹಿತ್ಯ ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್ ವಿ.ರೆಡ್ಡಿಹಳ್ಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ಸದ್ದಾಂ, ಫರ್ಹತ್, ಪಿಡಿಒ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ರಾಮಲಿಂಗಪ್ಪ, ನ್ಯಾತಪ್ಪ, ಕೆ.ಎನ್. ಗೋಪಿ, ಮಂಜುನಾಥ್, ಮಲ್ಲೇಗೌಡ, ಮಂಜುನಾಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.