ADVERTISEMENT

ಕೊಡಿಗೇನಹಳ್ಳಿ: ಮಕ್ಕಳಿಂದ ಮಾಯಾ ಗಡಿಯಾರ ನಾಟಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:21 IST
Last Updated 10 ಫೆಬ್ರುವರಿ 2026, 5:21 IST
ಕಡಗತ್ತೂರು ಶಾಲಾ ಮಕ್ಕಳಿಂದ ಮಾಯಾ ಗಡಿಯಾರ ನಾಟಕ ಪ್ರದರ್ಶನ
ಕಡಗತ್ತೂರು ಶಾಲಾ ಮಕ್ಕಳಿಂದ ಮಾಯಾ ಗಡಿಯಾರ ನಾಟಕ ಪ್ರದರ್ಶನ   

ಕೊಡಿಗೇನಹಳ್ಳಿ: ಹೋಬಳಿಯ ಕಡಗತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಐಎಫ್‌ಎ ಹಾಗೂ ಡಿಎಸ್‌ಇಇಆರ್‌ಟಿ ಸಹಯೋಗದಲ್ಲಿ ಮಾಯಾ ಗಡಿಯಾರ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.

ಕಲಾವಿದ ಶಿವಶಂಕರರೆಡ್ಡಿ ಮಾತನಾಡಿ, ಐಎಫ್‌ಎ ಇಂತಹ ಕಲಾ ಸಮ್ಮಿಳಿತ ಯೋಜನೆಗಳು ಮಕ್ಕಳನ್ನು ಕ್ರಿಯಾಶೀಲವಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಮಕ್ಕಳಿಂದ ಪ್ರಯೋಗಗೊಂಡ ಮಾಯಾ ಗಡಿಯಾರ ನಾಟಕ ಗಡಿಭಾಗದ ಜನತೆಗೆ ಗಡಿಯ ಸಾಮರಸ್ಯದ ಬಗ್ಗೆ ಜಾಗೃತ ಸಂದೇಶ ನೀಡಿದೆ. ‌ಭಾನುಪ್ರಕಾಶ್ ಅವರ ರಂಗ ಕೆಲಸದ ಜಾಣ್ಮೆ ಎದ್ದು ಕಾಣುತ್ತದೆ ಎಂದರು.

ಮುಖ್ಯ ಶಿಕ್ಷಕ ಮಹೇಶ್ ಬಾಬು ಮಾತನಾಡಿ, ಶಾಲೆಯ ಮಕ್ಕಳನ್ನು ಚಟುವಟಿಕೆಯಿಂದ ಇರುವಂತೆ ಸುನ್ನ-ಸೊನ್ನೆ, ವಡ್ಡಿ-ಬಡ್ಡಿ ಯೋಜನೆ ವಿನ್ಯಾಸಗೊಂಡಿದ್ದು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದಾರೆ ಎಂದರು.

ADVERTISEMENT

ಶಿಕ್ಷಕ ರಾಮಾಂಜಿನಪ್ಪ, ರವಿಚಂದ್ರ, ಪ್ರಹ್ಲಾದ್, ರಾಮಕೃಷ್ಣ, ಶ್ರೀನಿವಾಸ್, ಚಂದ್ರಕಲಾ, ರಂಗನಾಯಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.