
ಪ್ರಜಾವಾಣಿ ವಾರ್ತೆ
ಕೊರಟಗೆರೆ: ಶಿಥಿಲಾವಸ್ಥೆಯಲ್ಲಿದ್ದ ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರವನ್ನು ಸಮೀಪದ ಸುಸಜ್ಜಿತ ಬಾಡಿಗೆ ಕಟ್ಟಡಕ್ಕೆ ಶನಿವಾರ ಸ್ಥಳಾಂತರಿಸಲಾಯಿತು. ಹೊಸ ಕಟ್ಟಡದಲ್ಲಿ ಸಮರ್ಪಕ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಸೌಲಭ್ಯ ಒದಗಿಸಲಾಗಿದೆ.
ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರದ ದುಸ್ಥಿತಿ ಬಗ್ಗೆ ಶನಿವಾರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಬಿರುಕು ಬಿಟ್ಟ ಗೋಡೆಗಳು, ಹಾಳಾದ ಕಿಟಕಿ, ಬಾಗಿಲು ಹಾಗೂ ಯೋಗ್ಯವಿಲ್ಲದ ಶೌಚಾಲಯ ವ್ಯವಸ್ಥೆ ಕುರಿತು ವರದಿ ಮಾಡಲಾಗಿತ್ತು.
ತುರ್ತು ಕ್ರಮ ಕೈಗೊಂಡ ಅಧಿಕಾರಿಗಳು ಶನಿವಾರವೇ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.
ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.