ADVERTISEMENT

ಕೆಪಿಎಸ್‌ಸಿ ಪರೀಕ್ಷೆ: ರೈತನ ಮಗ ಎಸ್. ಭೂತೇಗೌಡನಿಗೆ 6ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 10:07 IST
Last Updated 26 ಡಿಸೆಂಬರ್ 2019, 10:07 IST
ಭೂತೇಗೌಡ
ಭೂತೇಗೌಡ   

ಶಿರಾ: ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ರೈತನ ಮಗ ಎಸ್. ಭೂತೇಗೌಡ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್‌ ಪಡೆದು ಪೊಲೀಸ್ ಉಪ ಅಧೀಕ್ಷಕರ ಹುದ್ದೆಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದು ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ.

ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ವಡ್ಡನಹಳ್ಳಿ ಗ್ರಾಮದ ಶಂಕರಲಿಂಗೇಗೌಡ ಹಾಗೂ ದಾಕ್ಷಾಯಿಣಿ ದಂಪತಿಗಳ ಪುತ್ರ ಭೂತೇಗೌಡ ವಡ್ಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 1ರಿಂದ 7ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದರು. ನಂತರ ಶಿರಾದ ಸೆಂಟ್ ಆನ್ಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ನಂತರ ಎಂಜಿನಿಯರಿಂಗ್‌ ಪದವಿ ಪೂರೈಸಿದರು.

ಇನ್ಫೋಸಿಸ್ ಸಂಸ್ಥೆಗೆ ಕ್ಯಾಂಪಸ್ ಆಯ್ಕೆಯಾದರೂ ಉದ್ಯೋಗಕ್ಕೆ ಹೋಗದೆ ಸ್ವರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಅವರ ಅಕ್ಕ ಮಂಜುವಾಣಿ ಮತ್ತು ಭಾವ ಶ್ರೀರಾಮ್ ಅವರೇ ಪ್ರೇರಣೆಯೇ ಸಾಧನೆ ಕಾರಣ. ಮೊದಲ ಪ್ರಯತ್ನದಲ್ಲೇ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯುವುದು ಕಷ್ಟ. ಕುದುರೆಯಂತೆ ನಿರಂತರವಾಗಿ ಓಡುತ್ತಿದ್ದರೆ ಯಶಸ್ಸು ಪಡೆಯಲು ಸಾಧ್ಯ’ ಎನ್ನುತ್ತಾರೆ ಭೋತೇಗೌಡ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.