
ಕುಣಿಗಲ್: ತಾಲ್ಲೂಕಿನ ಹುತ್ರಿಬೆಟ್ಟಕ್ಕೆ ಶಾಸಕ ಡಾ.ರಂಗನಾಥ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ತೆರಳಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಕೆಂಪೇಗೌಡರ ಬೆಂಗಳೂರು ನಗರ ನಿರ್ಮಾತೃ, ಜತೆಗೆ ಉತ್ತಮ ಆಡಳಿತಗಾರರಾಗಿದ್ದರು. ಕೆಂಪೇಗೌಡರು ಹುತ್ರಿದುರ್ಗದ ಕೋಟೆ ನಿರ್ಮಿಸಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದ್ದು, ತಾಲ್ಲೂಕಿನ ಯುವಜನರು ನಾಡಪ್ರಭು ಕೆಂಪೇಗೌಡರ ಸಾಧನೆಗಳನ್ನು ತಿಳಿಯಬೇಕಿದೆ. ಹುತ್ರಿದುರ್ಗದ ಕೋಟೆಯನ್ನು 16ನೇ ಶತಮಾನದಲ್ಲಿ ನಿರ್ಮಿಸಿದ್ದು, ಏಳುಸುತ್ತು ಇದೆ. ತದನಂತರ ಈ ಕೋಟೆಯು ಬಲಿಷ್ಠವಾದ ಸೇನಾಠಾಣೆಯಾಗಿ, ಉತ್ತಮ ರಕ್ಸಾ ಕೋಟೆಯಾಗಿದೆ ಎಂದು ಮಾಹಿತಿ ನೀಡಿದರು.
ಹುತ್ರಿದುರ್ಗದ ಕೋಟೆಯ ಜಲವರ್ಣದ ಚಿತ್ರ ಲಂಡನ್ ಮ್ಯೂಸಿಯಂನಲ್ಲಿದೆ. ಹುತ್ರಿದುರ್ಗದ ಕೋಟೆಯಿಂದ ಶಿವಗಂಗೆ ಬೆಟ್ಟಕ್ಕೆ ಸುರಂಗಮಾರ್ಗವಿದೆ. ಹುತ್ರಿದುರ್ಗದ ಕೋಟೆಯು ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಹೆಚ್ಚಿನ ಮಹತ್ವ ಪಡೆದಿದೆ. ಯುವಜನರು ಕೆಂಪೇಗೌಡರ ಸಾಧನೆ, ಆಡಳಿತ ಕೋಟೆಯ ಮಹತ್ವ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಟಿ.ಈಶ್ವರಪ್ಪ, ಅಧ್ಯಾಪಕ ಎಂ.ಟಿ.ಈಶ್ವರಪ್ಪ, ನಾಗಮ್ಮ, ಮೋಹನಕುಮಾರ್, ಗಂಗಾಧರ್, ಧರಣೇಶ್, ರವಿಕುಮಾರ್, ಸಂತೋಷ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.