ADVERTISEMENT

ಹೊಸಮನೆಯಲ್ಲಿ ಇಲ್ಲ ಹಬ್ಬ ಆಚರಣೆ; ನಿರಾಶರಾದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 11:28 IST
Last Updated 3 ಸೆಪ್ಟೆಂಬರ್ 2019, 11:28 IST
ಕುಣಿಗಲ್ ಪೊಲೀಸ್ ಠಾಣೆ ಹಿಂಬದಿಯಲ್ಲಿ ನಿರ್ಮಿಸಲಾಗಿರುವ ಪೊಲೀಸ್ ವಸತಿಗೃಹಗಳು
ಕುಣಿಗಲ್ ಪೊಲೀಸ್ ಠಾಣೆ ಹಿಂಬದಿಯಲ್ಲಿ ನಿರ್ಮಿಸಲಾಗಿರುವ ಪೊಲೀಸ್ ವಸತಿಗೃಹಗಳು   

ಕುಣಿಗಲ್: ಗೌರಿ ಗಣೇಶನ ಹಬ್ಬ ನೂತನ ವಸತಿ ಗೃಹಗಳಲ್ಲಿ ಆಚರಿಸುವ ಆಸೆ ಫಲಿಸದೆ ಪೊಲೀಸರು ನಿರಾಶರಾಗಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ಹಿಂಭಾಗ ₹ 2 ಕೋಟಿ ವೆಚ್ಚದಲ್ಲಿ 12 ಪೊಲೀಸ್ ವಸತಿಗೃಹಗಳ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೆ ಕಳೆದಿವೆ. ಶೇ 5ರಷ್ಟು ಕೆಲಸ ಕಾರ್ಯಗಳು ಮಾತ್ರ ಆಗಬೇಕಿದೆ. ಆ. 22ರಂದು ಅರ್ಹ ಸಿಬ್ಬಂದಿಗೆ ವಸತಿಗೃಹಗಳ ಹಂಚಿಕೆ ಮಾಡಲು ಹಿರಿಯ ಅಧಿಕಾರಿಗಳಿಂದ ಪತ್ರ ಬಂದಿದ್ದು, ಇನ್ನೇನು ವಸತಿಗೃಹಗಳ ಹಂಚಿಕೆಯಾಗುತ್ತದೆ. ಹೊಸ ಮನೆಗಳಲ್ಲಿ ಗೌರಿ ಗಣೇಶನ ಹಬ್ಬ ಆಚರಿಸುವ ಆಸೆ ಹೊಂದಿದ್ದ ಪೊಲೀಸ್ ಸಿಬ್ಬಂದಿಗೆ ನಿರಾಸೆ ಮೂಡಿದೆ.

ತುಮಕೂರು ಜಿಲ್ಲೆಯ ಇತರೆಡೆಗಳಲ್ಲಿ ವಸತಿಗೃಹಗಳು ನಿರ್ಮಾಣವಾಗಿದ್ದು, ಈಗಾಗಲೇ ಹಂಚಿಕೆಯಾಗಿದೆ. ಕುಣಿಗಲ್ ನಲ್ಲಿ ಮಾತ್ರ ಹಂಚಿಕೆ ವಿವಿಧ ಕಾರಣಗಳಿಂದ ನನೆಗುದಿಗೆ ಬೀಳುತ್ತಿದೆ. ಸಣ್ಣಪುಟ್ಟ ಕೆಲಗಳು ಬಾಕಿ ಇದೆ ಎನ್ನುತಾರೆ ಅಧಿಕಾರಿಗಳು. ಇನ್ನು ಕೆಡವಿಹಾಕಲಾದ ಹಳೆ ವಸತಿ ಗೃಹಗಳ ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ ವಸತಿಗೃಹಗಳಿಗೆ ವಿದ್ಯುತ್ ಸೌಲಭ್ಯ ನೀಡುವಲ್ಲಿ ಬೆಸ್ಕಾಂನವರು ತಕರಾರು ತೆಗೆದಿದ್ದಾರೆ. ಹಳೆ ಮನೆಗಳ ವಿದ್ಯುತ್ ಬಿಲ್ ಬಾಕಿಗೂ ಹೊಸ ವಸತಿಗೃಹಗಳ ವಿದ್ಯುತ್ ಸಂಪರ್ಕ ನೀಡವುದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ಪೊಲೀಸರು.

ADVERTISEMENT

‘ವಿದ್ಯುತ್ ಬಿಲ್ ವಿತರಣೆಯಲ್ಲಿ ಬೆಸ್ಕಾಂನವರು ಸಮಸ್ಯೆ ಉಂಟು ಮಾಡಿದ್ದಾರೆ. ಮನೆಗಳನ್ನು ಕೆಡವಿದ ಸಮಯದಲ್ಲಿ ವಿದ್ಯುತ್ ಬಿಲ್ ಲೆಕ್ಕಾಚಾರ ಮಾಡದೆ, ಕೆಡವಿದ ಮನೆಗಳಿಗೆ ಒಂದು ವರ್ಷದ ಬಿಲ್ ಸೇರಿಸಿ ಕೊಟ್ಟಿದ್ದಾರೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ಪೊಲೀಸ್ ಸಿಬ್ಬಂದಿ ದಂಡಕಟ್ಟಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎನ್ನುರವರು ಹಸರು ಹೇಳಲಿಚ್ಚಿಸದ ಪೊಲೀಸರೊಬ್ಬರು.

‘ವಸತಿಗೃಹ ನಿರ್ಮಾಣಕ್ಕಾಗಿ ಮನೆಗಳನ್ನು ಬಿಟ್ಟುಕೊಟ್ಟು ಒಂದುವರೆ ವರ್ಷದಿಂದ ₹ 6 ಸಾವಿರದಿಂದ ₹ 7 ಸಾವಿರ ತೆತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಶಿಸ್ತಿನ ಇಲಾಖೆಯಾದ್ದರಿಂದ ಮೇಲಧಿಕಾರಿಗಳ ಬಗ್ಗೆ ಎನೂ ಹೇಳಲು ಆಗದು. ವಿಧಿ ಇಲ್ಲ ಯಾವಾಗ ಹಂಚಿಕೆ ಮಾಡುತ್ತಾರೋ ಅಲ್ಲಿವರೆಗೆ ಕಾಯುತ್ತೇವೆ’ ಎಂದು ಪೊಲೀಸರು ಅಳಲು ತೊಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.