ADVERTISEMENT

ಬೆಳೆ ಸಮೀಕ್ಷೆಗೆ ಸಜ್ಜಾದ ಕುಣಿಗಲ್ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 2:55 IST
Last Updated 19 ಆಗಸ್ಟ್ 2021, 2:55 IST
ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿ, ಬೆಳೆ ಸಮೀಕ್ಷೆಗೆ ಸಿದ್ಧರಾಗಿರುವುದಾಗಿ ಪ್ರದರ್ಶಿಸಿದರು
ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿ, ಬೆಳೆ ಸಮೀಕ್ಷೆಗೆ ಸಿದ್ಧರಾಗಿರುವುದಾಗಿ ಪ್ರದರ್ಶಿಸಿದರು   

ಕುಣಿಗಲ್: ಗ್ರಾಮಾಂತರಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರ ಬೆಳೆ ಸಮೀಕ್ಷೆಯನ್ನು ಮೊಬೈಲ್ ಮೂಲಕ ನಡೆಸುವ
ಹೊಸ ಪ್ರಯತ್ನಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮಶ್ರೀ ಬುಧವಾರ ಚಾಲನೆನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಬೆಳೆ ಸಮೀಕ್ಷೆಯ ಆ್ಯಪ್ ಬಳಕೆ ವಿಧಾನವನ್ನುತಿಳಿಸಿದರು.

ವಿದ್ಯಾರ್ಥಿಗಳ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆಯ ಆ್ಯಪ್ ಡೌನ್‌ಲೋಡ್‌ನ ವಿವಿಧ ಹಂತಗಳನ್ನು ವಿವರಿಸಿ, ನಂತರ ತಮ್ಮ ಪೋಷಕರ ಜಮೀನಿನ ಬೆಳೆ ಸಮೀಕ್ಷೆ ಮಾಡುವಂತೆ ಮನವಿ ಮಾಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ಸೌಮ್ಯಶ್ರೀ, ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಲಿತಿದ್ದಾರೆ. ಸಂದೇಶಗಳನ್ನು, ಪಠ್ಯ ಕ್ರಮಗಳನ್ನು ಟ್ಯಾಬ್ ಬಳಕೆಯಲ್ಲಿ ಮಾಡುತ್ತಿದ್ದಾರೆ. ಇಲಾಖೆಯ ಆಶಯದಂತೆ ರೈತರು ತಮ್ಮ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಬೇಕಾಗಿದ್ದು, ಬಹುತೇಕ ರೈತರಿಗೆ ಸಮಸ್ಯೆಯಾಗಿದೆ. ಕೃಷಿ ಇಲಾಖೆಯ ಪ್ರತಿ ಸೌಲಭ್ಯಕ್ಕೂ ಬೆಳೆ ಸಮೀಕ್ಷೆ ವರದಿ ಅಗತ್ಯವಾಗಿದೆ. ಇಂತಹ ಸಮಯದಲ್ಲಿ ಮೊಬೈಲ್‌ ಬಳಕೆ ಮಾಡುತ್ತಿರುವ ವಿದ್ಯಾರ್ಥಿಗಳು ಬೆಳೆ ಸಮೀಕ್ಷೆ ಮಾಡುವುದರ ಮೂಲಕ ತಮ್ಮ ತಂದೆ ತಾಯಿಯರ ಜಮೀನು ಎಷ್ಟಿದೆ, ಎಲ್ಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಯಾದರೂ ಈ ನೆಪದಲ್ಲಿ ಪಡೆದುಕೊಳ್ಳ
ಬಹುದು. ಇದರಿಂದ ಪೋಷಕರಿಗೂ ಸಹಾಯವಾಗಲಿದೆ ಎಂದರು.

ತಾಂತ್ರಿಕ ಅಧಿಕಾರಿ ನೂರು ಅಜಂ, ಕ್ಷೇತ್ರ ತಾಂತ್ರಿಕ ಸಹಾಯಕ ದೇವರಾಜು, ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವೇಶ್ವರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.