ADVERTISEMENT

ಅಕ್ಷರ ಜ್ಞಾನಕ್ಕೆ ಆದ್ಯತೆ ನೀಡಿ: ಈಶ್ವರಾನಂದಪುರಿ ಸ್ವಾಮೀಜಿ ಸಲಹೆ

ತುಮಕೂರು ಜಿಲ್ಲಾ ಕುರುಬರ ಸಂಘದಿಂದ ದುರ್ಗಾಂಬಿಕಾದೇವಿ ಪ್ರತಿಷ್ಠಾಪನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 14:26 IST
Last Updated 27 ಫೆಬ್ರುವರಿ 2020, 14:26 IST
ತುಮಕೂರು ಜಿಲ್ಲಾ ಕುರುಬರ ಸಂಘದಿಂದ ಸಚಿವ ಬೈರತಿ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಈಶ್ವರಾನಂದಪುರಿ ಸ್ವಾಮೀಜಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್‌.ಹುಲಿನಾಯ್ಕರ್‌, ಜಿ.ಬಿ.ಜ್ಯೋತಿಗಣೇಶ್‌ ಇದ್ದರು.
ತುಮಕೂರು ಜಿಲ್ಲಾ ಕುರುಬರ ಸಂಘದಿಂದ ಸಚಿವ ಬೈರತಿ ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಈಶ್ವರಾನಂದಪುರಿ ಸ್ವಾಮೀಜಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್‌.ಹುಲಿನಾಯ್ಕರ್‌, ಜಿ.ಬಿ.ಜ್ಯೋತಿಗಣೇಶ್‌ ಇದ್ದರು.   

ತುಮಕೂರು: ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಬೇಕು ಎಂದು ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ಜಿಲ್ಲಾ ಕುರುಬರ ಸಂಘ ಹಾಗೂ ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ‘ದುರ್ಗಾಂಬಿಕಾದೇವಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಳಶ ಸ್ಥಾಪನೆ’ ಹಾಗೂ ‘ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ದೇವಸ್ಥಾನ ನಿರ್ಮಿಸಿ, ಭಕ್ತ ಹಾಗೂ ವಿದ್ಯೆ ಕಲಿಕೆಯ ಪ್ರತೀಕರಾದ ಕಾಳಿದಾಸ ಮತ್ತು ದೇವಿಯನ್ನು ಸ್ಮರಿಸುತ್ತಿರುವುದು ಸಂತಸದ ವಿಚಾರ. ಸಮುದಾಯದಲ್ಲಿ ಅಕ್ಷರಸ್ಥರು ಹೆಚ್ಚಿದಷ್ಟು ಸಮುದಾಯವು ಮುಂದುವರಿಯುತ್ತದೆ ಎಂದರು.

ADVERTISEMENT

ಬೆಂಗಳೂರಿನ ಸುವರ್ಣಮುಖಿ ಆಶ್ರಮದ ಆಚಾರ್ಯ ನಾಗರಾಜ್‌, ‘ಸಮಾಜದಲ್ಲಿ ಶಾಲೆಗಳು, ಆಶ್ರಮಗಳು ಹೆಚ್ಚಬೇಕು. ವೃದ್ಧಾಶ್ರಮಗಳು ಹೆಚ್ಚಾಗಬಾರದು. ವೃದ್ಧಾಶ್ರಮಗಳು ನಮ್ಮ ಸಂಸ್ಕೃತಿಯ ಭಾಗವಲ್ಲ. ಪೋಷಕರನ್ನು ಸಲುಹುವುದು ಮಕ್ಕಳ ಆದ್ಯ ಕರ್ತವ್ಯ’ ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ‘ಸಮುದಾಯದಲ್ಲಿ ಅನಕ್ಷರಸ್ಥರು ಹೆಚ್ಚು ಇದ್ದಾರೆ. ತುಳಿತಕ್ಕೆ ಒಳಗಾದವರೂ ಬಹಳ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ವಿದ್ಯೆಯೊಂದೆ ಮಾರ್ಗ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಬೆಳೆಸಲು ಸಂಘವು ಪ್ರಯತ್ನಿಸುತ್ತದೆ’ ಎಂದು ಭರವಸೆ ನೀಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್‌ ಅವರನ್ನು ಸನ್ಮಾನಿಸಲಾಯಿತು.

ರೋಹಿಣಿ ಗುಂಡೂರಾವ್‌ ಅವರು ವೀಣಾ ವಾದನ ಪ್ರಸ್ತುತ ಪಡಿಸಿ ಸಭಿಕರನ್ನು ರಂಜಿಸಿದರು. ಹರೀಶ್‌ ಮತ್ತು ತಂಡದವರು ಭಕ್ತಿ ಗೀತೆಗಳನ್ನು ಹಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್‌.ಸುರೇಶ್‌, ಕಾರ್ಯಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಮಾಲೂರಪ್ಪ, ಕಾರ್ಯದರ್ಶಿ ಸಿ.ಪುಟ್ಟರಾಜು, ಜಂಟಿ ಕಾರ್ಯದರ್ಶಿಗಳಾದ ಟಿ.ಇ.ರಘುರಾಮ್‌, ಟಿ.ಎಚ್‌.ಮಹದೇವ, ಖಜಾಂಚಿ ಧರ್ಮರಾಜು ಇದ್ದರು.

*
ದುರ್ಗಾಂಬಿಕೆಯನ್ನು ಭಕ್ತಿಯಿಂದ ಆರಾಧಿಸುವುದರ ಜತೆಗೆ ಕಾಳಿದಾಸರಂತೆ ವಿನಯದಿಂದ ವಿದ್ಯೆಗಳನ್ನು ಕಲಿಯಬೇಕು.
-ಈಶ್ವರಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.