ADVERTISEMENT

ಪ್ರಧಾನ ಮಂತ್ರಿ ಕರೆಗೆ ಬೆಳಗಿದ ದೀಪ

ನಗರದಲ್ಲಿ ಬಹುತೇಕ ಮಂದಿಯಿಂದ ಸ್ಪಂದನೆ; ಮನೆ ಮನೆಗಳಲ್ಲಿ ಹಣತೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:39 IST
Last Updated 5 ಏಪ್ರಿಲ್ 2020, 16:39 IST
ತುಮಕೂರು ನಗರದಲ್ಲಿ ಪ್ರಧಾನಿ ಕರೆಗೆ ಸ್ಪಂದಿಸಿದ ಹೆಣ್ಣುಮಕ್ಕಳು ಭಾನುವಾರ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದರು
ತುಮಕೂರು ನಗರದಲ್ಲಿ ಪ್ರಧಾನಿ ಕರೆಗೆ ಸ್ಪಂದಿಸಿದ ಹೆಣ್ಣುಮಕ್ಕಳು ಭಾನುವಾರ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದರು   

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ನಗರದ ನಾಗರಿಕರು ಸ್ಪಂದಿಸಿದರು. ಭಾನುವಾರ ರಾತ್ರಿ 9ಕ್ಕೆ ಮನೆಗಳಲ್ಲಿ ವಿದ್ಯುತ್‌ ದೀಪಗಳನ್ನು ಆರಿಸಿ ಮೇಣದ ಬತ್ತಿ, ದೀಪ ಹಚ್ಚಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

ಕೆಲವೆಡೆ ನಾಗರಿಕರು ಹಣತೆ, ಮೇಣದಬತ್ತಿ ಹಚ್ಚಿದರೆ, ಮತ್ತೆ ಕೆಲವೆಡೆ ಟಾರ್ಚ್‌, ಲಾಟೀನು, ಮೊಬೈಲ್‌ ಟಾರ್ಚ್‌ ಬೆಳಗಿಸಿದರು. ಅನೇಕರು ಮನೆಯ ಅಂಗಳ, ಬಾಲ್ಕನಿಯಲ್ಲಿ ದೀಪ ಬೆಳಗಿಸಿದರು. ಕೆಲವೆಡೆ ರಸ್ತೆಗಳಲ್ಲಿ ರಂಗೋಲಿ, ಭಾರತ ನಕಾಶೆ ಬಿಡಿಸಿ ಅದರಲ್ಲಿ ಹಣತೆ ಇಟ್ಟು ಗಮನ ಸೆಳೆದರು.

ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರು ಭಾರತ್‌ ಮಾತಾಕೀ ಜೈ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈ ಎಂದು ಘೋಷಣೆಗಳನ್ನು ಮೊಳಗಿಸಿದರು.

ADVERTISEMENT

ನಗರದ ಅಲ್ಲಲ್ಲಿ ಹಣತೆ, ದೀಪ, ಮೇಣದಬತ್ತಿ ಹಚ್ಚಿದ್ದ ದೃಶ್ಯ ಕಂಡು ಬಂದರೆ, ಇನ್ನೂ ಕೆಲವು ಕಡೆಗಳಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ತಮಗೂ, ಪ್ರಧಾನಿ ಕರೆಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದರು.

ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜ್ಯೋತಿಗಣೇಶ್‌ ತಮ್ಮ ಮನೆಯಲ್ಲಿ ದೀಪ ಬೆಳಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.