ADVERTISEMENT

ಚಿರತೆ ದಾಳಿ ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 22 ಮೇ 2020, 16:44 IST
Last Updated 22 ಮೇ 2020, 16:44 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮದನಮಡು ಗ್ರಾಮದಲ್ಲಿ ಚಿರತೆ ದಾಳಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡ್ಲಯ್ಯನನ್ನು ಡಿಎಸ್ಎಸ್ ಮುಖಂಡರಾದ ಬೇವಿನಹಳ್ಳಿ ಚನ್ನಬಸವಯ್ಯ, ಗೋ.ನಿ.ವಸಂತ್ ಕುಮಾರ್, ಗೋವಿಂದರಾಜು, ಮಂಜುನಾಥ್, ಚಂದ್ರಶೇಖರ್ ಭೇಟಿ ಮಾಡಿದ್ದರು.

ಚಿಕ್ಕನಾಯಕನಹಳ್ಳಿ: ಚಿರತೆ ದಾಳಿಯಿಂದಾಗಿ ಮದನಮಡು ಗ್ರಾಮದ ಮೂಡ್ಲಯ್ಯ ಎಂಬುವವರು ತೀವ್ರ ಗಾಯಗೊಂಡಿದ್ದಾರೆ.

ಅವರು ಮದನಮಡು ಗ್ರಾಮದ ಸೀಡ್ಯಕೆರೆ ಬಳಿ ಕುರಿ ಮೇಯಿಸುತ್ತಿದ್ದಾಗೆ ಚಿರತೆ ದಾಳಿ ಮಾಡಿದೆ. ತಲೆ, ಕಿವಿಗಳಿಗೆ ಗಾಯಗಳಾಗಿವೆ. ಮೂಡ್ಲಯ್ಯ ಅವರ ಕಿರುಚಾಟಕ್ಕೆ ಅಕ್ಕಪಕ್ಕದ ತೋಟದವರು ಬರುವುದನ್ನು ಕಂಡ ಚಿರತೆ ಓಡಿ ಹೋಗಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕಂದಿಕೆರೆ ಭಾಗದ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್‌ ಇಟ್ಟು ಚಿರತೆ ಸೆರೆಹಿಡಿಯಬೇಕು ಎಂದು ಆಸ್ಪತ್ರೆಗೆ ಭೇಟಿ ನೀಡಿದ ಡಿಎಸ್ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಆಗ್ರಹಿಸಿದ್ದಾರೆ.

ADVERTISEMENT

ಡಿಎಸ್ಎಸ್ ಮುಖಂಡರಾದ ಗೋ.ನಿ.ವಸಂತ್ ಕುಮಾರ್, ಜೆ.ಸಿ.ಪುರ ಗೋವಿಂದರಾಜು, ಎಸ್.ಎಸಿ.ಎಸ್.ಟಿ ನೌಕರರ ಸಮನ್ವಯ ಸಮಿತಿಯ ಮಂಜುನಾಥ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.