ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಹಬುಕನಹಳ್ಳಿ ಗ್ರಾಮದಲ್ಲಿ ಎಮ್ಮೆ ಕರುವನ್ನು ಚಿರತೆ ಹೊತ್ತೊಯ್ದು ತಿಂದು ಹಾಕಿದೆ.
ಹಬುಕನಹಳ್ಳಿ ಬಸವೇಶ್ವರ ನಗರದ ಪ್ರಕಾಶ್ ಅವರ ಮನೆ ಮುಂದೆ ಕಟ್ಟಿದ್ದ ಎಮ್ಮೆ ಕರುವನ್ನು ಚಿರತೆ ತಿಂದು ಹಾಕಿದೆ. ಕೆಲ ದಿನಗಳ ಹಿಂದಷ್ಟೇ ಗ್ರಾಮದೊಳಗೆ ಚಿರತೆ ನುಗ್ಗಿ ನಾಯಿ ಮತ್ತು ಮೇಕೆಯನ್ನು ಹಿಡಿದು ಪೊದೆಯೊಳಗೆ ಒಯ್ದು ತಿಂದು ಹಾಕಿತ್ತು.
ಐದಾರು ಚಿರತೆಗಳು ಈ ಪ್ರದೇಶಗಳಲ್ಲಿ ಓಡಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಗಮನಕ್ಕೆ ತಂದರೂ ಚಿರತೆ ಹಿಡಿಯಲು ಬೋನು ಇಟ್ಟಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.