ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿ ಜಾಬಘಟ್ಟದ ಮೋಹನ್‌ಕುಮಾರ್ ಅವರ ತೋಟದ ಮನೆಯಲ್ಲಿ ಚಿರತೆ ದಾಳಿಯಿಂದಾಗಿ ಏಳು ಕುರಿ ಮೃತಪಟ್ಟಿದ್ದು, ಎರಡು ಅಸ್ವತ್ವಗೊಂಡಿವೆ.
ಮೋಹನ್‌ಕುಮಾರ್ ತೋಟದ ಮನೆಯಲ್ಲಿ ಕುರಿ ಹಾಗೂ ಜಾನುವಾರುಗಳಿಗೆ ಕೊಟ್ಟಿಗೆ ವ್ಯವಸ್ಥೆ ಮಾಡಿದ್ದಾರೆ. ಗುರುವಾರ ಮುಂಜಾನೆ ಎರಡು ಚಿರತೆಗಳು ದಾಳಿ ಮಾಡಿವೆ. ಕುರಿಗಳ ಕೂಗಾಟ ಕೇಳಿ ಹೊರಬಂದ ಮೋಹನ್‌ಕುಮಾರ್ ಪತ್ನಿ ಕಿರುಚಿಕೊಂಡಾಗ ಚಿರತೆಗಳು ಅಲ್ಲಿಂದ ತೆರಳಿವೆ.
ಹಲವು ದಿನಗಳಿಂದ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹುಣಸೇಘಟ್ಟ ಪಶುವೈದ್ಯಾಧಿಕಾರಿ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.