ADVERTISEMENT

ಹೇಮಾವತಿ ಕಾಲುವೆಯೊಳಗಿದ್ದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 11:37 IST
Last Updated 16 ಏಪ್ರಿಲ್ 2020, 11:37 IST
ಸೆರೆಯಾಗಿರುವ ಚಿರತೆ
ಸೆರೆಯಾಗಿರುವ ಚಿರತೆ   

ಹೆಬ್ಬೂರು (ತುಮಕೂರು ತಾ): ಹೋಬಳಿಯ ದೊಡ್ಡಗೊಲ್ಲಹಳ್ಳಿ ಬಳಿಯ ಹೇಮಾವತಿ ಕಾಲುವೆಯಲ್ಲಿದ್ದ ಒಂದು ವರ್ಷದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದ್ದಾರೆ.

ಈ ಹಿಂದೆ ಇದೇ ರೀತಿ ಹಾಲನೂರು ಗ್ರಾಮದ ಹೇಮಾವತಿ ಕಾಲುವೆಯಲ್ಲಿದ್ದ ಚಿರತೆ ಸೆರೆ ಹಿಡಿಯಲಾಗಿತ್ತು. ಆದರೆ ಆ ಚಿರತೆ ಸುಲಭವಾಗಿ ಸೆರೆ ಆಗಿರಲಿಲ್ಲ. ಸಿಬ್ಬಂದಿ, ಚಿರತೆ ಮುಖಕ್ಕೆ ಬೋನ್ ಇಟ್ಟು ಮತ್ತೊಂದು ಬದಿಯಿಂದ ಪಟಾಕಿ ಸಿಡಿಸಿದ ನಂತರ ಅದು ಬೋನಿನೊಳಗೆ ನುಗ್ಗಿತ್ತು.

ಆದರೆ ಇಲ್ಲಿನ ಕಾಲುವೆ ವಿಸ್ತಾರವಾಗಿರುವ ಕಾರಣ ಸೆರೆ ಕಾರ್ಯಾಚರಣೆ ಅಷ್ಟು ‍ಪ್ರಾಯಾಸವೇನೂ ಆಗಲಿಲ್ಲ ಎಂದು ತುಮಕೂರು ತಾಲ್ಲೂಕು ವಲಯ ಅರಣ್ಯಾಧಿಕಾರಿ ನಟರಾಜ್ ತಿಳಿಸಿದರು.

ADVERTISEMENT

ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಹೆಬ್ಬೂರು ಠಾಣೆ ಎಸ್‌ಐ ಸುಂದರ್ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಪ್ರಕಾಶ್, ನಟರಾಜು, ಮಂಜುನಾಥ್, ರವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಭಾಗದಲ್ಲಿ ಚಿರತೆ ಚಲನವಲನಗಳು ಹೆಚ್ಚಿದೆ. ಹೆಬ್ಬೂರು ಹಾಗೂ ಗೂಳೂರು ಹೋಬಳಿ ವ್ಯಾಪ್ತಿಯಲ್ಲಿಯೇ 9 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.