ADVERTISEMENT

ರೈತನ ಮೇಲೆ ದಾಳಿ; ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 16:36 IST
Last Updated 1 ಸೆಪ್ಟೆಂಬರ್ 2020, 16:36 IST
ಗುಬ್ಬಿ ತಾಲ್ಲೂಕು ಮುದ್ದುಪುರ ಗ್ರಾಮದಲ್ಲಿ ಕರಡಿ ಸೆರೆ ಹಿಡಿಯಲಾಯಿತು
ಗುಬ್ಬಿ ತಾಲ್ಲೂಕು ಮುದ್ದುಪುರ ಗ್ರಾಮದಲ್ಲಿ ಕರಡಿ ಸೆರೆ ಹಿಡಿಯಲಾಯಿತು   

ಗುಬ್ಬಿ: ತೋಟಕ್ಕೆ ತೆರಳಿದ್ದ ರೈತನ ಕಿವಿ ಕಚ್ಚಿ ತುಂಡರಿಸಿ, ಗಾಯಗೊಳಿಸಿ ಪೊದೆ ಸೇರಿದ್ದ ಕರಡಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ತಾಲ್ಲೂಕಿನ ನಿಟ್ಟೂರು ಹೋಬಳಿ ಮುದ್ದುಪುರ ಗ್ರಾಮದಲ್ಲಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.

ರೈತ ಮಹದೇವಯ್ಯ (53) ಮುಂಜಾನೆ ತಮ್ಮ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಕರಡಿ ದಿಢೀರ್ ದಾಳಿ ನಡೆಸಿ ಕಿವಿಯನ್ನು ಕಚ್ಚಿ ತುಂಡರಿಸಿ ಮೈಮೇಲೆರಗಿ ಪರಚಿ ಗಾಯಗೊಳಿಸಿತ್ತು. ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಜನರನ್ನು ಕಂಡು ಪೊದೆ ಸೇರಿತ್ತು.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪೊದೆಯಲ್ಲಿ ಅವಿತ ಕರಡಿ ಹಿಡಿಯಲು ಹಾಸನದ ಅರವಳಿಕೆ ತಜ್ಞ ಡಾ.ಮರುಳೀಧರ್ ನೇತೃತ್ವದ ತಂಡ ಕರೆಸಿದರು. ನಂತರ ಸೆರೆ ಹಿಡಿಯಲಾಯಿತು.

5 ವರ್ಷದ ಗಂಡು ಕರಡಿಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು ಎಂದು ವಲಯ ಅರಣ್ಯಾಧಿಕಾರಿ ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.