ADVERTISEMENT

ತುಮಕೂರು: ಕುಣಿಗಲ್ ಬಳಿ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 6:13 IST
Last Updated 22 ಜನವರಿ 2021, 6:13 IST
ನಡೆ ಮಾವಿನ ಪುರದಲ್ಲಿ ಸೆರೆಯಾಗಿರುವ ಚಿರತೆ
ನಡೆ ಮಾವಿನ ಪುರದಲ್ಲಿ ಸೆರೆಯಾಗಿರುವ ಚಿರತೆ   

ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡಿಯೂರು ಹೋಬಳಿ ನಡೆಮಾವಿನಪುರ ಗ್ರಾಮದ ಶಂಕರ್ ಎಂಬುವವರ ತೋಟದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಶುಕ್ರವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ.

3 ವರ್ಷದ ಗಂಡು ಚಿರತೆ ಇದಾಗಿದೆ.‌

ಜಿಲ್ಲೆಯಲ್ಲಿ 2019ರ ನವೆಂಬರ್ ನಿಂದ ಇಲ್ಲಿಯವರೆಗೂ ಅರಣ್ಯ ಇಲಾಖೆಯ ಬೋನಿನಲ್ಲಿ 47 ಚಿರತೆಗಳು ಸೆರೆಯಾಗಿವೆ. ಈ ಅವಧಿಯಲ್ಲಿ ಐದು ಮಂದಿ ಚಿರತೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ADVERTISEMENT

ಮೂರು ಚಿರತೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. 2020ರ ನವೆಂಬರ್ ನಲ್ಲಿಯೇ 9 ಚಿರತೆಗಳು ಸೆರೆಯಾಗಿವೆ.

ಜಿಲ್ಲೆಯಲ್ಲಿ ಚಿರತೆ ಮತ್ತು ಮಾನವ ಸಂಘರ್ಷ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.