ADVERTISEMENT

ಗರ್ಭಿಣಿಯರು ಮೊಬೈಲ್‌ನಿಂದ ದೂರವಿರಲಿ

ಮಾರುತಿನಗರದ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್‌ನ ಗೀತಾ ನಾಗರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 16:01 IST
Last Updated 10 ಜೂನ್ 2019, 16:01 IST

ತುಮಕೂರು: ಗರ್ಭಿಣಿಯರು ಇರುವ ಮನೆಯಲ್ಲಿ ಸಂತಸದ ವಾತಾವರಣ ಇರಬೇಕು. ಸುತ್ತಮುತ್ತಲೂ ನೈರ್ಮಲ್ಯ ವಾತಾವರಣ ಬಹುಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್‌ನಿಂದ ಅವರು ದೂರವಿರಬೇಕು ಎಂದು ಚಿನ್ಮಯ ಮಿಷನ್ ಸಂಚಾಲಕಿ ಗೀತಾ ನಾಗರಾಜು ಹೇಳಿದರು.

ನಗರದ ನಿವೇದಿತಾ ಪ್ರತಿಷ್ಠಾನವು ಮಾರುತಿನಗರದ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಆಯೋಜಿಸಿದ್ಧ ಗರ್ಭಸಂಸ್ಕಾರ ಮತ್ತು ಸೀತಾನವಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗರ್ಭಿಣಿಯು ತನ್ನ ಒಡಲಲ್ಲಿರುವ ಮಗುವಿನ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಸರಳವಾದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಸದಾ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳುವುದು, ಸಂಗೀತ ಆಲಿಸುವುದು ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿವರಿಸಿದರು.

ADVERTISEMENT

ತಾಯಿ ಮಲಗಿದ್ದಾಗ ಒಡಲಲ್ಲಿರುವ ಮಗು ಎಚ್ಚರವಾಗಿರುತ್ತದೆ. ಗರ್ಭಿಣಿಯಲ್ಲಾಗುವ ಸಂತೋಷ, ದುಃಖ, ಕೋಪ, ಉದ್ವೇಗ, ಮತ್ತಿತರ ಬದಲಾವಣೆಗಳು ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಪ್ರತಿ ಕ್ಷಣವನ್ನು ಒತ್ತಡವಿಲ್ಲದೇ ಸಂತೋಷದಿಂದ ಇರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಆರೋಗ್ಯ ಕೇಂದ್ರದ ಡಾ.ಸುದರ್ಶನ್ ಅವರು ಗರ್ಭಿಣಿಯರು ಸೇವಿಸಬಹುದಾದ ಆಹಾರದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಲಾಯಿತು.

ಉಪನ್ಯಾಸಕಿ ರಾಧಿಕಾ, ನಿವೇದಿತಾ ಪ್ರತಿಷ್ಠಾನದ ಮುಕ್ತ, ಇಂದುಮತಿ, ಶಶಿಕಲಾ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.