ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ | 18 ಮಂದಿ ಕಣದಲ್ಲಿ; 4 ನಾಮಪತ್ರ ವಾಪಸ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 13:31 IST
Last Updated 8 ಏಪ್ರಿಲ್ 2024, 13:31 IST

ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ನಾಲ್ಕು ಮಂದಿ ಪಕ್ಷೇತರರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಒಟ್ಟು 22 ಮಂದಿ ನಾಮಪತ್ರ ಸಲ್ಲಿಸಿದ್ದು, 18 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ವಿ.ಪ್ರಭಾಕರ್, ಎನ್.ಹನುಮಯ್ಯ, ಕೆ.ಹುಚ್ಚೇಗೌಡ, ಡಿ.ಎಂ.ಅನಂತರಾಜು ನಾಮಪತ್ರ ವಾಪಸ್ ಪಡೆದವರು.

ಸ್ಪರ್ಧೆಯಲ್ಲಿ ಉಳಿದವರು: ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಬಹುಜನ ಸಮಾಜ ಪಕ್ಷದ ಜೆ.ಎನ್.ರಾಜಸಿಂಹ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಎಸ್.ಎನ್.ಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರದೀಪ್ ಕುಮಾರ್ ದೊಡ್ಡ ಮುದ್ದೇಗೌಡ, ನ್ಯಾಷನಲ್ ಮಹಾಸಭಾ ಪಕ್ಷದ ಎಚ್.ಆರ್.ಬಸವರಾಜು, ಕನ್ನಡ ಪಕ್ಷದ ಎಚ್.ಬಿ.ಎಂ.ಹಿರೇಮಠ್, ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ, ಬಿ.ದೇವರಾಜು, ಆರ್.ನಾರಾಯಣಪ್ಪ, ಎಚ್.ಎಸ್.ನೀಲಕಂಠೇಶ, ಆರ್.ಪುಷ್ಪ, ಪ್ರಕಾಶ್ ಆರ್.ಎ.ಜೈನ್, ಮಲ್ಲಿಕಾರ್ಜುನಯ್ಯ, ಎಚ್.ಎಲ್.ಮೋಹನ್ ಕುಮಾರ್, ಆರ್.ಎಸ್.ರಂಗನಾಥ, ಜೆ.ಕೆ ಸಮಿ, ಟಿ.ಬಿ.ಸಿದ್ದರಾಮೇಗೌಡ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.