
ತುಮಕೂರು: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಅಂಗವಾಗಿ ಬುಧವಾರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಶ್ರಾವಣಿ, ಉಡುಪಿಯ ಅಂಕಿತ್ ಚಿನ್ನದ ಪದಕ ಪಡೆದರು. ಉದ್ದ ಜಿಗಿತದಲ್ಲಿ ತುಮಕೂರಿನ ಆರ್.ವಿ.ಪ್ರಾಪ್ತಿ, ಬಿ.ನವೀನ್ ಮೊದಲ ಸ್ಥಾನ ಪಡೆದು, ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
ಮಹಿಳೆಯರ ವಿಭಾಗ: 200 ಮೀಟರ್ ಓಟ– ಶ್ರಾವಣಿ ಬಾಟೆ (ದಕ್ಷಿಣ ಕನ್ನಡ)–1, ವೈಭವಿ (ಬೆಳಗಾವಿ)–2, ರೀತು ಶ್ರೀ (ದಕ್ಷಿಣ ಕನ್ನಡ)–3. 800 ಮೀಟರ್– ರೇಖಾ ಬಸಪ್ಪ ಪಿರೋಜಿ (ದಕ್ಷಿಣ ಕನ್ನಡ)–1, ಜಿ.ಮನುಶ್ರೀ (ಬೆಂಗಳೂರು ನಗರ)–2, ರಚನಾ ನಾಯಕ್ (ಬೆಂಗಳೂರು ನಗರ)–3.
ಉದ್ದ ಜಿಗಿತ– ಆರ್.ವಿ.ಪ್ರಾಪ್ತಿ (ತುಮಕೂರು)–1, ಕೆ.ಲಿನ್ಯಾ ಮರ್‍ಯಾ (ಮೈಸೂರು)–2, ಸಾಕ್ಷಿ ಕಾರ್ಕಡ (ದಕ್ಷಿಣ ಕನ್ನಡ)–3. ಹ್ಯಾಮರ್ ಥ್ರೋ– ಸ್ಪ್ರುಹಾ (ಬೆಳಗಾವಿ)–1, ಅಮ್ರೀನ್ (ದಕ್ಷಿಣ ಕನ್ನಡ)–2, ಧನ್ಯಾ ನಾಯ್ಕ್ (ಉತ್ತರ ಕನ್ನಡ)–3. 3 ಸಾವಿರ ಮೀಟರ್ ಸ್ಟೀಪಲ್ ಚೇಸ್– ಎಚ್.ಎಂ.ಹರ್ಷಿತಾ (ಮೈಸೂರು)–1, ಎಂ.ಎಂ.ನಕೋಶ (ಬೆಳಗಾವಿ)–2.
ಪುರುಷರ ವಿಭಾಗ: 200 ಮೀಟರ್– ಅಂಕಿತ್ ಜೋಗಿ (ಉಡುಪಿ)–1, ಮಾರ್ಕ್ ಡಿ.ಕೊಸ್ಟ (ಉಡುಪಿ)–2, ಆಯುಷ್ ಆರ್.ದೇವಡಿಗ (ದಕ್ಷಿಣ ಕನ್ನಡ)–3. 800 ಮೀಟರ್ ಓಟ– ಕೆ.ಯಶ್ವಂತ್ (ದಕ್ಷಿಣ ಕನ್ನಡ)–1, ಎಂ.ಎಸ್.ಆಶ್ರಿತ್ (ಶಿವಮೊಗ್ಗ)–2, ಜೆ.ಆರ್.ಕಲ್ಯಾಣ್ (ಬೆಂಗಳೂರು ನಗರ)–3. ಉದ್ದ ಜಿಗಿತ– ಬಿ.ನವೀನ್ (ತುಮಕೂರು)–1, ಜಾಫರ್‌ಖಾನ್ ಸರ್ವರ್ (ಬೆಳಗಾವಿ)–2, ಪೃಥ್ವಿ ಸರೆಗರ್ (ಬೆಂಗಳೂರು ನಗರ)–3.
ಡಿಸ್ಕಸ್ ಥ್ರೋ– ಮೊಹ್ಮದ್ ಸಕ್ಲೈನ್ ಅಹ್ಮದ್ (ಮೈಸೂರು)–1, ನಾಗೇಂದ್ರ ಅಣ್ಣಪ್ಪ ನಾಯಕ್ (ಉತ್ತರ ಕನ್ನಡ)–2, ಸ್ಮಿತ್ ಜವಿಯ (ದಕ್ಷಿಣ ಕನ್ನಡ)–3. 3 ಸಾವಿರ ಮೀಟರ್ ಸ್ಟೀಪಲ್ ಚೇಸ್– ನಾಗರಾಜ್ (ಧಾರವಾಡ)–1, ಬಾಬು ವೈ ಹೆಗ್ರಿ (ಧಾರವಾಡ)–2, ಚನ್ನಕೇಶವ (ದಕ್ಷಿಣ ಕನ್ನಡ)–3.
ಕೊಕ್ಕೊ: ಮೈಸೂರು ಬೆಂಗಳೂರು ಫೈನಲ್‌ಗೆ
ಕೊಕ್ಕೊ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಬೆಂಗಳೂರು ಮತ್ತು ದಕ್ಷಿಣ ಕನ್ನಡ ತಂಡಗಳು ಫೈನಲ್ ತಲುಪಿವೆ. ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ ಫೈನಲ್ ಪ್ರವೇಶಿಸಿದೆ. ಗುರುವಾರ ಅಂತಿಮ ಪಂದ್ಯಗಳು ನಡೆಯಲಿವೆ. ಹ್ಯಾಂಡ್‌ಬಾಲ್ ಸ್ಪರ್ಧೆಯ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಹಾಸನ ತಂಡಗಳು ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದಿವೆ. ಗುರುವಾರ ಪುರುಷರ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಹಾಸನ– ಬೆಂಗಳೂರು ನಗರ ತಂಡಗಳು ಮುಖಾಮುಖಿಯಾಗಲಿವೆ. 2ನೇ ಪಂದ್ಯದಲ್ಲಿ ಮೈಸೂರು– ಬೆಂಗಳೂರು ಗ್ರಾಮಾಂತರ ತಂಡಗಳು ಕಾದಾಡಲಿವೆ. ಮಹಿಳೆಯರ ಮೊದಲ ಪಂದ್ಯದಲ್ಲಿ ಹಾಸನ ತಂಡ ಬೆಂಗಳೂರು ನಗರ ತಂಡವನ್ನು ಎದುರಿಸಲಿದೆ.
ಇಂದು ತೆರೆ
ಕಳೆದ 6 ದಿನಗಳಿಂದ ನಡೆಯುತ್ತಿದ್ದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗುರುವಾರ ಸಂಜೆ ತೆರೆ ಬೀಳಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದಾರೆ. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.