ADVERTISEMENT

ಕೊರಟಗೆರೆ ಬಳಿ ಕಾರಿಗೆ ಲಾರಿ ಡಿಕ್ಕಿ: ಗೋವಾದಿಂದ ಬರುತ್ತಿದ್ದ ಇಬ್ಬರು ಯುವಕರ ಸಾವು

ಹೊಳವನಹಳ್ಳಿ ಗ್ರಾಮದ ಪ್ರವೀಣ್ (23), ಹರ್ಷೀತ್ (22) ಮೃತರು.

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 6:47 IST
Last Updated 6 ಜನವರಿ 2025, 6:47 IST
<div class="paragraphs"><p>ಕೊರಟಗೆರೆ ಬಳಿ ಕಾರಿಗೆ ಲಾರಿ ಡಿಕ್ಕಿ</p></div>

ಕೊರಟಗೆರೆ ಬಳಿ ಕಾರಿಗೆ ಲಾರಿ ಡಿಕ್ಕಿ

   

ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ಕಂಬದಹಳ್ಳಿ ಬಳಿ ಸೋಮವಾರ ಬೆಳಗಿನ ಜಾವ ಕಾರು ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಪ್ರವೀಣ್ (23), ಹರ್ಷೀತ್ (22) ಮೃತರು. ಗೋವಾಗೆ ಹೋಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.

ADVERTISEMENT

ಮಧುಗಿರಿ ಕಡೆಯಿಂದ ಬರುತ್ತಿದ್ದ ಇಟಿಎಸ್ ಕಾರು ಹಾಗೂ ಕಂಬದಹಳ್ಳಿ ಕಡೆಯಿಂದ ಹೊರಟಿದ್ದ ಲಾರಿ ಮುಖಾಮುಖಿಯಾಗಿವೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.