
ಮಧುಗಿರಿ: ತಾಲ್ಲೂಕಿನಲ್ಲಿ ಬಿಸಿಲಿನ ಬೇಗೆ ದಿನ ದಿನದಿಂದ ಹೆಚ್ಚುತ್ತಿದೆ. ಬಿಸಿಲಿನೊಂದಿಗೆ ದಾಹವೂ ಹೆಚ್ಚಳವಾಗುತ್ತಿರುವುದರಿಂದ ದಾಹ ತಣಿಸಲು ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.
ಮಧುಗಿರಿ ಪಟ್ಟಣದಲ್ಲಿ ಹಲವು ಕಡೆ ರಸ್ತೆಬದಿಯಲ್ಲಿ ಹಾಗೂ ತಾಲ್ಲೂಕಿನ ಕೆಲವು ಗ್ರಾಮ ಹಾಗೂ ರಸ್ತೆಬದಿಯಲ್ಲಿ ಎಳನೀರು, ಕಬ್ಬಿನ ಜ್ಯೂಸ್ ಹಾಗೂ ಕಲ್ಲಂಗಡಿ ಮಾರಾಟ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ರೈತರು ತನ್ನ ಜಮೀನುಗಳಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ತಾವೇ ತಂದು ಮಾರಾಟ ಮಾಡುತ್ತಿದ್ದಾರೆ.
ಹಲವು ವರ್ಷಗಳ ಹಿಂದೆ ಜನರು ಹೆಚ್ಚಾಗಿ ಪೆಪ್ಸಿ, ಕೋಕೋ ಕೋಲಾದಂತಹ ಇತರೆ ಪಾನೀಯಗಳ ಮೊರೆ ಹೋಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಲ್ಲಂಗಡಿ, ಎಳನೀರು, ಕಬ್ಬು, ಕರಬೂಜ, ಸಪೋಟ, ದ್ರಾಕ್ಷಿ, ನಿಂಬೆ, ಮೋಸಂಬಿ, ಕಿತ್ತಳೆಯಂತಹ ಹಣ್ಣುಗಳ ಮೊರೆ ಹೋಗುತ್ತಿರುವುದು ಆಶಾದಾಯಕ ಸಂಗತಿ ಎನ್ನುತ್ತಾರೆ ರೈತರು.
ಮಧುಗಿರಿ ತಾಲ್ಲೂಕಿನ ಮುದ್ದಯ್ಯನಪಾಳ್ಯದ ರಸ್ತೆ ಬದಿಯಲ್ಲಿ ಎಳೆ ನೀರು ಕುಡಿಯುತ್ತಿರುವ ಜನರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.