ADVERTISEMENT

ತುಮಕೂರು: ಮಾಂಗಲ್ಯ ಸರ ಕಿತ್ತು ಪರಾರಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 4:25 IST
Last Updated 25 ಜುಲೈ 2024, 4:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜಯನಗರ ಪೂರ್ವ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಎಂ.ಮಂಜುಳಾ ಎಂಬುವರ ಮಾಂಗಲ್ಯ ಸರ ಕಿತ್ತು ಕಳ್ಳನೊಬ್ಬ ಪರಾರಿಯಾಗಿದ್ದಾನೆ.

ರಾತ್ರಿ 9 ಗಂಟೆ ಸಮಯದಲ್ಲಿ ಮಂಜುಳಾ ತಮ್ಮ ಮಗಳು ಮತ್ತು ಅಕ್ಕಪಕ್ಕದ ಮನೆಯವರ ಜತೆ ಶೆಟ್ಟಿಹಳ್ಳಿ ರಸ್ತೆಯ ಬೇಕರಿಗೆ ಹೋಗಿ ವಾಪಸ್‌ ಬರುವಾಗ ಘಟನೆ ನಡೆದಿದೆ. ಎಲ್ಲರು ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಕಳ್ಳ ಮಂಜುಳಾ ಕೊರಳಲ್ಲಿದ್ದ ಸುಮಾರು ₹3.50 ಲಕ್ಷ ಮೌಲ್ಯದ 68 ಗ್ರಾಂ ಸರ ಕಿತ್ತುಕೊಂಡು ಹೋಗಿದ್ದಾನೆ.

ಸ್ಥಳದಲ್ಲಿದ್ದ ಎಲ್ಲರು ಕಳ್ಳನನ್ನು ಹಿಂಬಾಲಿಸಿದ್ದು, ಆತ ದೂರದಲ್ಲಿ ನಿಂತಿದ್ದ ಬೈಕ್‌ ಹತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಈ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.