ADVERTISEMENT

ಮಧುಗಿರಿ: ರಾಜಣ್ಣಗೆ ಸಚಿವ ಸ್ಥಾನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:06 IST
Last Updated 16 ಸೆಪ್ಟೆಂಬರ್ 2025, 5:06 IST
<div class="paragraphs"><p>ಕೆ.ಎನ್ ರಾಜಣ್ಣ </p></div>

ಕೆ.ಎನ್ ರಾಜಣ್ಣ

   

– ಪ್ರಜಾವಾಣಿ ಚಿತ್ರ

ಮಧುಗಿರಿ: ಯಾವುದೇ ತಪ್ಪನ್ನು ಮಾಡದೇ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವುದು ಅಹಿಂದ ವರ್ಗಕ್ಕೆ ನೋವು ತಂದಿದೆ ಎಂದು ತಾಲ್ಲೂಕು ಅಹಿಂದ ಸಂಚಾಲಕ ವೆಂಕಟರವಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರು ರಾಜ್ಯದ ಜಾತಿಗಣತಿಗೆ ಬೆಂಬಲ ನೀಡಿದ್ದರು. ಆದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಾತಿಗಣತಿಯನ್ನು ವಿರೋಧ ಮಾಡಿದ್ದರು. ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಬಾರದೇ ಡಿ.ಕೆ.ಶಿವಕುಮಾರ್‌ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ್ದರು.

ಅಂಬಾನಿ, ಆದಾನಿ ಕುಟುಂಬಗಳ ವಿವಾಹ, ಜಗ್ಗಿ ವಾಸುದೇವ್ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ಮಾಡಿದರು. ಇಷ್ಟೆಲ್ಲಾ ತಪ್ಪುಗಳು ಮಾಡಿರುವ ಅವರನ್ನು ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಕೆ.ಎನ್.ರಾಜಣ್ಣ ಯಾವುದೇ ತಪ್ಪು ಮಾಡದೇ ಇದ್ದರೂ ಸಂಪುಟದಿಂದ ಕೈಬಿಟ್ಟಿರುವುದು ಅಹಿಂದ ವರ್ಗಕ್ಕೆ ಮಾಡಿದ ಅನ್ಯಾಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ ನಂಜುಂಡಯ್ಯ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳಿಗೆ ಮೊದಲ ನಾಯಕ ಸಿದ್ದರಾಮಯ್ಯ ನಂತರ ಎರಡನೇಯವರು ರಾಜಣ್ಣ. ಅವರಿಗೆ ರಾಜಕೀಯ ಶಕ್ತಿ ನೀಡದೆ ಹೋದರೆ ರಾಜ್ಯದಲ್ಲಿ ಹಿಂದುಳಿದ ವರ್ಗದವರು ಮತ್ತೆ ಹಿಂದುಳಿಯವಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.

ಬಲಿಜ ಸಂಘದ ಅಧ್ಯಕ್ಷ ಎಂ.ಎಸ್ ಶಂಕರನಾರಾಯಣ, ರಾಜಣ್ಣ ಅವರು ಅಹಿಂದ ನಾಯಕರಾಗಿದ್ದು ಹಿಂದುಳಿದವರಿಗೆ ರಾಜಕೀಯ ಶಕ್ತಿ ನೀಡುವಲ್ಲಿ ಮೊದಲಿಗರು. ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಾಪುರ ವೀರಣ್ಣ ಮಾತನಾಡಿದರು. ತಾಲ್ಲೂಕು ನಾಯಕ ಸಮುದಾಯದ ಅಧ್ಯಕ್ಷ ಜಗದೀಶ್, ಮಡಿವಾಳ ಸಂಘದ ಅಧ್ಯಕ್ಷ ಈಶ್ವರಯ್ಯ, ಈಡಿಗ ಸಮುದಾಯದ ಎಂ .ಎನ್ ‌.ನರಸಿಂಹಮೂರ್ತಿ, ಪುರಸಭೆ ಸದಸ್ಯ ಶ್ರೀಧರ್, ಸುರೇಶ್, ಯಾದವ ಸಂಘದ ಕಾರ್ಯದರ್ಶಿ ಕರಿಯಣ್ಣ, ಮಾದಿಗ ನೌಕರರ ಸಂಘದ ರಂಗಾಧಾಮಯ್ಯ, ಉಪ್ಪಾರ ಸಂಘದ ಅಧ್ಯಕ್ಷ ದಾಸಪ್ಪ, ಸಿ.ಎನ್ ಸಿದ್ದಪ್ಪ, ಭಾವಸಾರ ಕ್ಷತ್ರೀಯ ಸಂಘದ ಸತ್ಯನಾರಾಯಣರಾವ್, ಸವಿತ ಸಮುದಾಯದ ಶಿವಕುಮಾರ್, ಬಲಿಜ ಸಂಘದ ಕಾರ್ಯದರ್ಶಿ ವೆಂಕಟರಾಮು, ಸೋಮವಂಶ ಆರ್ಯ ಕ್ಷತ್ರೀಯ ಸಂಘದ ಕಾರ್ಯದರ್ಶಿ ಜಿ.ನಾರಾಯಣರಾಜು, ಗಂಗಮತಸ್ಥ ಸಂಘದ ರಂಗನಾಥ್, ಭಗೀರಥ ಸಂಘದ ಸಿ.ಎನ್ ನಾಗಣ್ಣ, ಸರ್ವಜ್ಞ ವೇದಿಕೆಯ ದೇವರಾಜು, ಪ್ರದೀಪ್ ಕುಮಾರ್, ನಾಯಕ ಸಂಘದ ಚಂದ್ರಗಿರಿ ರಾಜಣ್ಣ, ಶಂಕರನಾರಾಯಣ, ಎಂ.ಎನ್.ರಾಜೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.