ತಿಪಟೂರು: ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ನಂದಿ ರಥ ಯಾತ್ರೆಗೆ ತಿಪಟೂರು ನಗರದಲ್ಲಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.
ನಗರದ ಕೆಂಪಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಗರದ ಗುರುಕುಲ ಮಠದ ಆವರಣದ ವೇದಿಕೆ ಕಾರ್ಯಕ್ರಮದವರೆಗೂ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ, ಗೋವುಗಳಿಗೆ ಆರತಿ ಬೆಳಗಿ ನಮನ ಸಲ್ಲಿಸಲಾಯಿತು.
ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದ ಸಂಸ್ಕೃತಿ ಉಳಿಯಬೇಕಾದರೆ ದೇಶಿಯ ಗೋವುಗಳ ಸಂರಕ್ಷಣೆ ಮಾಡಬೇಕಾದ ಅನಿವಾರ್ಯ ಇದೆ. ಗೋವಿಗೂ ಹಾಗೂ ದೇಶದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ ಎಂದರು.
ಶಿವನ ದೇವಸ್ಥಾನಕ್ಕೆ ಹೊದರೆ ಮೊದಲು ನಂದಿಯನ್ನು ಕಂಡು ದೇವಾಲಯದ ಒಳಗೆ ಹೋಗಬೇಕಾಗಿತ್ತು. ಗ್ರಾಮೀಣ ಭಾಗದಲ್ಲಿ ಎತ್ತು ಇಲ್ಲದವನಿಗೆ ಎದೆ ಇಲ್ಲ ಎಂಬ ಹೆಸರಿತ್ತು. ದೇಶಿ ಪದ್ಧತಿಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಬೇಕಾಗಿದೆ ಎಂದರು.
ತುಮಕೂರು ವಿಭಾಗ ಗೋ ಸೇವಾ ಸಂಯೋಜಕ ಪ್ರಾಣೇಶ್‌ಜೀ ಮಾತನಾಡಿ, ದೇಶೀಯ ಗೋವುಗಳು ದೇಶದ ಸಂಪತ್ತು. ಅವುಗಳನ್ನು ಸಂರಕ್ಷಿಸಿ ಪೋಷಿಸುವುದು ಕರ್ತವ್ಯ ಎಂದರು.
ಮಾಜಿ ಸಚಿವ ಬಿ.ಸಿ.ನಾಗೇಶ್, ಡಾ.ಶ್ರೀಧರ್, ಜನಜಾಗೃತಿ ವೇದಿಕೆಯ ಸದಸ್ಯ ತರಕಾರಿ ಗಂಗಾಧರ್, ಓಹಿಲಾ ಗಂಗಾಧರ್, ವಿನಯ್ ಮಡೇನೂರು, ಉಮೇಶ್ ಗೊರಗೊಂಡನಹಳ್ಳಿ, ಎಚ್.ಎನ್ ಚಂದ್ರಶೇಖರ್, ಈಡೇನಹಳ್ಳಿ ನಾಗಭೂಷಣ್, ರವಿ ತಂಡಗ, ಶ್ಯಾಮ್ ಸುಂದರ್, ಜಗದೀಶ್, ಸತೀಶ್, ಗುಲಾಬಿ ಸುರೇಶ್, ಬಸವರಾಜು, ಹರ್ಷ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.