ಹುಳಿಯಾರು ಲಕ್ಷ್ಮೀಪುರ ಗ್ರಾಮದಲ್ಲಿ ಶಾಸಕ ಸಿ.ಬಿ.ಸುರೇಶ್‌ಬಾಬು ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆಗೆ ಚಾಲನೆ ನೀಡಿದರು
ಹುಳಿಯಾರು: ನ್ಯಾನೋ (ದ್ರವರೂಪದ ಯೂರಿಯಾ) ಬಳಸಿ ರೈತರು ಸಮಯ ಹಾಗೂ ಹಣ ಉಳಿಸಿ ಉತ್ತಮ ಫಸಲು ಪಡೆಯಬಹುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ಲಕ್ಷ್ಮೀಪುರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶನಿವಾರ ರಾಗಿ ಬೆಳೆಗೆ ಡ್ರೋನ್ ಮೂಲಕ ನ್ಯಾನೋ ಯುರಿಯಾ ಸಿಂಪಡಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐದಾರು ರೈತರು ಒಟ್ಟಿಗೆ ಸೇರಿ ಹದಿನೈದಿಪ್ಪತ್ತು ಎಕರೆ ಬೆಳೆಗೆ ಸಿಂಪಡಣೆ ಮಾಡಿಸಿಕೊಳ್ಳಬಹುದು. ಒಂದು ಎಕರೆಗೆ ಅರ್ಧ ಲೀ. ನ್ಯಾನೋ ಗೊಬ್ಬರ ಸಾಕಾಗುತ್ತದೆ. ಘನ ರೂಪದ ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗಿದ್ದು ಅಂಗಡಿಗಳ ಮುಂದೆ ನಿಂತು ಕಾಯುವುದನ್ನು ತಪ್ಪುತ್ತದೆ ಎಂದರು.
ಕೃಷಿ ಇಲಾಖೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಶಿವರಾಜ್‌ಕುಮಾರ್ ಮಾತನಾಡಿ, ಪ್ರತಿ ಎಕರೆಗೆ 22 ಕೆ.ಜಿ.ಯೂರಿಯಾ ಮೇಲು ಗೊಬ್ಬರವಾಗಿ ನೀಡಬೇಕು. ರೈತರು ಹೆಚ್ಚು ಯೂರಿಯಾ ಬಳಕೆಯಿಂದ ತೊಂದರೆ ಹೆಚ್ಚಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.