ADVERTISEMENT

ತುಮಕೂರು | ‘ಭಾರತ ಯುವ ಜನರ ದೇಶ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 4:34 IST
Last Updated 1 ಆಗಸ್ಟ್ 2025, 4:34 IST
<div class="paragraphs"><p>ತುಮಕೂರು ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಗುರುವಾರ ಶನೇಶ್ವರಸ್ವಾಮಿ, ಮಹಾಗಣಪತಿ, ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಸಮಾರಂಭಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. </p></div>

ತುಮಕೂರು ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಗುರುವಾರ ಶನೇಶ್ವರಸ್ವಾಮಿ, ಮಹಾಗಣಪತಿ, ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಸಮಾರಂಭಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

   

ತುಮಕೂರು: ಭಾರತದಲ್ಲಿ ಯುವಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಜಗತ್ತಿನ ಇತರೆ ಯಾವುದೇ ರಾಷ್ಟ್ರದಲ್ಲೂ ಇಷ್ಟೊಂದು ಸಂಖ್ಯೆಯ ಯುವ ಸಮೂಹ ಇಲ್ಲವಾಗಿದೆ. ಈ ಮಾನವ ಸಂಪತ್ತನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕಿದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ಮಾಡಿದರು.

ತಾಲ್ಲೂಕಿನ ಕೆ.ಪಾಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತಗಾನಹಳ್ಳಿಯಲ್ಲಿ ಗುರುವಾರ ನಡೆದ ಶನೇಶ್ವರಸ್ವಾಮಿ, ಮಹಾಗಣಪತಿ, ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ, ಗೋಪುರ ಕಳಸ ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ADVERTISEMENT

ವಿಶ್ವದ ಇತರೆ ದೇಶಗಳಿಗಿಂತ ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ. ಯುವಜನರು ಹಿರಿಯರ ಮಾರ್ಗದರ್ಶನದಲ್ಲಿ ದೇಶದ ಅಭ್ಯುದಯಕ್ಕೆ ಸಂಕಲ್ಪ ಮಾಡಬೇಕು. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ದೇಶ, ನಾಡು, ಸಮಾಜದ ರಕ್ಷಣೆ, ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ಹೇಳಿದರು.

25 ವರ್ಷಗಳ ಹಿಂದೆ ರಾಜ್ಯದಲ್ಲಿ ಸುಮಾರು 5 ಕೋಟಿ ಜನ ಸಂಖ್ಯೆ ಇದ್ದ ಸಮಯದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 5 ಕೋಟಿ ವೃಕ್ಷ ಯೋಜನೆಯಡಿ ಗಿಡ ನೆಡುವ ಸಂಕಲ್ಪ ಮಾಡಿದ್ದರು. ಜೀವಸಂಕುಲ ಉಳಿಯಬೇಕಾದರೆ ಪರಿಸರ ಸಂರಕ್ಷಿಸಬೇಕಿದೆ. ಉಸಿರಾಡುವ ಆಮ್ಲಜನಕ ಗಿಡ, ಮರಗಳಿಂದಲೇ ಬರಬೇಕು. ಹಸಿರು ಸಂಪತ್ತು ಹೆಚ್ಚಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಬಿ.ಸುರೇಶ್‍ಗೌಡ, ‘ದೇವಸ್ಥಾನಗಳು ಆಯಾ ಗ್ರಾಮಗಳ ಭಕ್ತಿ ಕೇಂದ್ರಗಳಾಗಬೇಕು. ಊರಿನ ಎಲ್ಲರೂ ಪರಸ್ಪರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಒಟ್ಟಾಗಿ ಬಾಳಬೇಕು. ದ್ವೇಷ, ಅಸೂಯೆ ಮರೆತರೆ ಶಾಂತಿ, ನೆಮ್ಮದಿಯಿಂದ ಬದುಕಬಹುದು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಚಂದ್ರಶೇಖರ್, ಸದಸ್ಯೆ ಜಯಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ಬಿಜೆಪಿ ಮುಖಂಡರಾದ ಶಂಕರಣ್ಣ, ಸುಮಿತ್ರಾದೇವಿ, ರೇಣುಕಮ್ಮ, ಮುಖಂಡರಾದ ಬಸವರಾಜು, ಯತೀಶ್, ಮಧುಸೂದನ್, ಜಯಣ್ಣ, ಪುಷ್ಪಲತಾ, ಗಿರೀಶ್, ಉಮಾದೇವಿ, ಲಕ್ಷ್ಮಿದೇವಮ್ಮ, ಮಂಜುಳಾ ಪಾಲ್ಗೊಂಡಿದ್ದರು.

ದೇವಸ್ಥಾನಕ್ಕೆ ಭೂಮಿ ದಾನ ಕೊಟ್ಟಿರುವ ಗಂಗಮ್ಮ, ಗಂಗನರಸಯ್ಯ, ಸಿದ್ಧಲಿಂಗಯ್ಯ, ಗೌರಮ್ಮ, ಚಿಕ್ಕರಂಗಯ್ಯ ಕುಟುಂಬದವರು, ದಾನಿಗಳನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.