ADVERTISEMENT

ಮಹಾಸಭಾ ಪದಾಧಿಕಾರಿ ‘ಸೇವಾಧೀಕ್ಷೆ’ ನಾಳೆ

ಪದಾಧಿಕಾರಿಗಳ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 5:33 IST
Last Updated 10 ಏಪ್ರಿಲ್ 2025, 5:33 IST
ಡಾ.ಎಸ್‌.ಪರಮೇಶ್‌
ಡಾ.ಎಸ್‌.ಪರಮೇಶ್‌   

ತುಮಕೂರು: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ (ಸೇವಾಧೀಕ್ಷಾ) ಸಮಾರಂಭ ಏ. 11ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

‘ಧರ್ಮ ಜಾಗೃತಿ, ಏಕತೆ, ಸಂಸ್ಕಾರ ಬೆಳಸಿ ಸಂಘಟನೆ ಬಲಗೊಳಿಸುವ ಉದ್ದೇಶದಿಂದ 1904ರಲ್ಲಿ ಮಹಾಸಭಾ ಸ್ಥಾಪಿಸಲಾಯಿತು. ಕಳೆದ 120 ವರ್ಷಗಳಿಂದ ಮಹಾಸಭಾ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ. ಈಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರು ಪದಗ್ರಹಣದ ಜತೆಗೆ ಸಾಧಕರಿಗೆ ಸನ್ಮಾನ, ಸದಸ್ಯತ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್‌.ಪರಮೇಶ್‌ ಇಲ್ಲಿ ಬುಧವಾರ ತಿಳಿಸಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕೆರೆಗೋಡಿ ರಂಗಾಪುರದ ಗುರುಪರದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರಾದ ಎಸ್.ಶಿವಣ್ಣ, ಜೆ.ಸಿ.ಮಾಧುಸ್ವಾಮಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಮಹಾಸಭಾ ಪದಾಧಿಕಾರಿಗಳಾದ ಎಲ್.ಪಿ.ರವಿಶಂಕರ್, ವಿಶ್ವನಾಥ್ ಅಪ್ಪಾಜಪ್ಪ, ಆರ್.ಬಿ.ಜಯಣ್ಣ, ತಳವಾರಹಳ್ಳಿ ಟಿ.ಎಂ.ವಿಜಯಕುಮಾರ್, ಟಿ.ಎಸ್.ರುದ್ರಪ್ರಸಾದ್, ಕೆ.ಎಲ್‌.ದರ್ಶನ್, ಮಮತಾ ದಿವಾಕರ್, ಎನ್.ಜಯಣ್ಣ, ಸದಾಶಿವಯ್ಯ, ವಿಶ್ವನಾಥ್, ಸತ್ಯಮಂಗಲ ಜಗದೀಶ್, ಉಮಮಹೇಶ್, ಡಿ.ಎನ್.ಯೋಗೀಶ್ವರ್, ಶ್ರೀಧರ್, ರಾಜಶೇಖರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.