ADVERTISEMENT

ಶಿರಾ: ಒಂದೇ ದಿನ, ಒಂದೇ ವೇದಿಕೆಯಲ್ಲಿ ಹಲವು ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 4:37 IST
Last Updated 28 ಅಕ್ಟೋಬರ್ 2020, 4:37 IST
ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಪರ ಮತಯಾಚಿಸಿದರು
ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಪರ ಮತಯಾಚಿಸಿದರು   

ಶಿರಾ: ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ ಮಂಗಳವಾರ ಒಂದೇ ದಿನ, ಒಂದೇ ವೇದಿಕೆಯಲ್ಲಿ ಹಲವು ಸಮುದಾಯಗಳ ಸಮಾವೇಶ ನಡೆಸಿತು.

ಪರಿಶಿಷ್ಟ ಸಮುದಾಯದ ಮುಖಂಡರ ಸೇರ್ಪಡೆ, ಹಳ್ಳಿಕಾರ್ ಒಕ್ಕಲಿಗರ ಯುವ ಸಮಾವೇಶ, ಕಾಡುಗೊಲ್ಲ ಯುವಕರ ಸಮಾವೇಶ, ಕುಂಚಿಟಿಗ ಒಕ್ಕಲಿಗರ ಯುವ ಮುಖಂಡರ ಸಮಾವೇಶಗಳನ್ನು ಬಿಜೆಪಿ ನಡೆಯಿತು. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಮಾವೇಶಗಳಿಗೆ ಚಾಲನೆ ನೀಡಿದರು.

ಹಳ್ಳಿಕಾರ್ ಒಕ್ಕಲಿಗರ ಸಮಾವೇಶದಲ್ಲಿ ವಾಜರಹಳ್ಳಿ ನರಸಿಂಹೇಗೌಡ, ಡ್ಯಾಗೇರಹಳ್ಳಿ ಹನುಮಂತರಾಯಪ್ಪ ಹಾಜರಿದ್ದು ಹಾಗೂ ಕಾಡುಗೊಲ್ಲರ ಯುವಕರ ಸಮಾವೇಶದಲ್ಲಿ ಚಂಗಾವರ ಮಾರಣ್ಣ ಹಾಜರಿದ್ದು, ಸಮುದಾಯದವರು ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ADVERTISEMENT

ಶಾಸಕ ರೇಣುಕಾಚಾರ್ಯ, ಯೋಜನಾ ಆಯೋಗದ ಉಪಾಧ್ಯಕ್ಷ ಪುಟ್ಟಸ್ವಾಮಿ, ವಿಧಾನಪರಿಷತ್‌ ಸದಸ್ಯ ಎಂ.ಟಿ.ಬಿ.ನಾಗರಾಜು ಬಿಜೆಪಿ ಪರವಾಗಿ ಪ್ರಚಾರ ಮಾಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಿಕ್ಕನಹಳ್ಳಿ, ಗುಮ್ಮನಹಳ್ಳಿ, ಗುಮ್ಮನಹಳ್ಳಿ ಕಾಲೊನಿ ಮತ್ತು ಯಲಿಯೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ, ಸಂಸದ ಎ.ನಾರಾಯಣಸ್ವಾಮಿ, ಮುಖಂಡ ನೆ.ಲ.ನರೇಂದ್ರಬಾಬು, ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯ ವೈ.ಎಚ್.ಹುಚ್ಚಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.