
ಪ್ರಜಾವಾಣಿ ವಾರ್ತೆ
ತುಮಕೂರು: ‘2013ರಲ್ಲಿಯೇ ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಬೇಕಿತ್ತು’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದ ವೇದಿಕೆಗೆ ಸಚಿವ ಪರಮೇಶ್ವರ ಬರುತ್ತಿದ್ದಂತೆ ‘ಮುಂದಿನ ಸಿ.ಎಂ ಪರಮೇಶ್ವರ ಅವರಿಗೆ ಜೈ’ ಎಂದು ಮುಖಂಡರು ಘೋಷಣೆ ಕೂಗಿದರು.
ಆಗ ಮಹದೇವಪ್ಪ, ‘ಆಗ ಸುಮ್ಮನಿದ್ದ ನೀವೆಲ್ಲ ಈಗ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳುತ್ತಿದ್ದೀರಿ’ ಎಂದರು. ‘ಲಂಬಾಣಿಗರ ಬೇಡಿಕೆಗೆ ಜಯವಾಗಲಿ’ ಎಂದು ಧ್ವನಿಗೂಡಿಸಿದರು.
‘ದಿನ ಬೆಳಗಾದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವವರು ಹೆಚ್ಚಾಗಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದು ಪರಮೇಶ್ವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.