
ಪಾವಗಡ: ಅಂಗವಿಕಲರನ್ನು ಸ್ವಾವಲಂಬಿಗಳನ್ನಾಗಿಸಲು ಅಂಗವಿಕಲರ ಜೀವನೋಪಾಯ ಯೋಜನೆ ಸಹಕಾರಿ ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಚೆಶೈರ್ ಡಿಸಬಿಲಿಟಿ ಟ್ರಸ್ಟ್, ಅಜುರ್ ಪವರ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ನಡೆದ ಅಂಗವಿಕಲರ ಜೀವನೋಪಾಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಗೆ ನೋಂದಾಯಿಸಿಕೊಳ್ಳುವವರಿಗೆ ಶಾರದಾದೇವಿ ದೃಷ್ಟಿ ನಿರ್ವಹಣಾ ಸಂಸ್ಥೆಯಲ್ಲಿ ಉಚಿತ ಊಟೋಪಚಾರ ಸಹಿತ ತರಬೇತಿ ನೀಡಲಾಗುವುದು. ಹೆಚ್ಚುವರಿಯಾಗಿ ಕಂಪ್ಯೂಟರ್ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಈಗಾಗಲೇ ಹಲವು ಅಂಗವಿಕಲರು ತರಬೇತಿ ಪಡೆಯುತ್ತಿದ್ದಾರೆ. ಶಾರದಾದೇವಿ ದೃಷ್ಟಿ ನಿರ್ವಹಣ ಸಂಸ್ಥೆಯಿಂದ ಆರು ಮಂದಿ ಪದವಿ ಮುಗಿಸಿ ಮುಂದಿನ ಹಂತಕ್ಕೆ ತಲುಪಿದ್ದಾರೆ ಎಂದರು.
ಚೆಶೈರ್ ಡಿಸಬಿಲಿಟಿ ಟ್ರಸ್ಟ್ ಸಿಇಒ ಅನುರಾಧ ಪಾಟೀಲ್, ಯೋಜನೆಯ ಮೂಲಕ ಅಂಗವಿಕಲರಿಗೆ ಜೀವನದ ಹಾದಿಯನ್ನು ಸುಗಮಗೊಳಿಸಬಹುದಾಗಿದೆ ಎಂದು ತಿಳಿಸಿದರು.
ಅಜೂರ್ ಪವರ್ ಇಂಡಿಯಾದ ಸಿಎಸ್‌ಆರ್ ಕೋ-ಆರ್ಡಿನೇಟರ್ ಅಮೃತ್ ಕುಮಾರ್, ಗಾಯಿ ರವೀಶ್, ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಜಿ.ಆರ್. ಚಂದ್ರಕಲಾ, ಎಂ.ಆರ್.ಡಬ್ಲ್ಯೂ, ಮೈಲಾರಪ್ಪ, ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ತೋತ್ಯಾನಾಯ್ಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.