ADVERTISEMENT

ಪಾವಗಡ | ಹಾಳಾದ ರಸ್ತೆ; ಸಂಕಷ್ಟದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:45 IST
Last Updated 27 ಆಗಸ್ಟ್ 2025, 5:45 IST
ಪಾವಗಡದಿಂದ ಶ್ರೀರಂಗಪುರ, ಗ್ಯಾದಿಗುಂಟೆ, ಪೆಡ್ಲಿಜೀವಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿರುವುದು
ಪಾವಗಡದಿಂದ ಶ್ರೀರಂಗಪುರ, ಗ್ಯಾದಿಗುಂಟೆ, ಪೆಡ್ಲಿಜೀವಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿರುವುದು   

ಪಾವಗಡ: ತಾಲ್ಲೂಕಿನ ಶ್ರೀರಂಗಪುರ, ಗ್ಯಾದಿಗುಂಟೆ, ಪೆಂಡ್ಲಿಜೀವಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಈ ಭಾಗದ ಜನತೆ ಆರೋಪಿಸಿದ್ದಾರೆ.

ಹಲವು ವರ್ಷದ ಹಿಂದೆ ಹಾಕಿದ್ದ ಡಾಂಬರ್ ಕಿತ್ತು ಹೋಗಿದೆ. ಈ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಳಾಗಿದ್ದು, ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಕಷ್ಟವಾಗುತ್ತಿದೆ.

ರಾತ್ರಿ ಸಾಕಷ್ಟು ಮಂದಿ ಗುಂಡಿಗಳಿಂದ ಅಪಘಾತಕ್ಕೀಡಾಗಿ ಕೈ ಕಾಲು ಮುರಿದುಕೊಂಡಿರುವ ನಿದರ್ಶನಗಳಿವೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡಿರುವ ಉದಾಹರಣೆಯೂ ಇವೆ ಎಂದು ಗ್ರಾಮಸ್ಥರು ತಿಳಿಸಿದರು.

ADVERTISEMENT

ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ಸ್ಥಿತಿ ಹೇಳಲಾಗದು. ಈ ಭಾಗಕ್ಕೆ ಹೆಚ್ಚಿನ ಬಸ್ ಬಾರದ ಕಾರಣ ದ್ವಿಚಕ್ರ ವಾಹನ, ಆಟೊಗಳನ್ನೇ ಮಕ್ಕಳು ಅವಲಂಬಿಸಬೇಕಿದೆ. ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.