ADVERTISEMENT

ಪಾವಗಡ: ಸಹಕಾರಿ ಬ್ಯಾಂಕ್‌ನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:21 IST
Last Updated 10 ಫೆಬ್ರುವರಿ 2026, 5:21 IST
ಪಾವಗಡ ತಾಲ್ಲೂಕಿನ ತಿರುಮಣಿಯಲ್ಲಿ ಶುಕ್ರವಾರ ಶ್ರೀನಿಧಿ ಸೌಹರ್ದ ಸಹಕಾರಿ ಬ್ಯಾಂಕ್ ಶಾಖೆ ಉದ್ಘಾಟಿಸಲಾಯಿತು
ಪಾವಗಡ ತಾಲ್ಲೂಕಿನ ತಿರುಮಣಿಯಲ್ಲಿ ಶುಕ್ರವಾರ ಶ್ರೀನಿಧಿ ಸೌಹರ್ದ ಸಹಕಾರಿ ಬ್ಯಾಂಕ್ ಶಾಖೆ ಉದ್ಘಾಟಿಸಲಾಯಿತು   

ಪಾವಗಡ: ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಶುಕ್ರವಾರ ಶ್ರೀನಿಧಿ ಸೌಹರ್ದ ಸಹಕಾರಿ ಬ್ಯಾಂಕ್‌ನ 9ನೇ ಶಾಖೆಯನ್ನು ಉದ್ಘಾಟಿಸಲಾಯಿತು.

ಬ್ಯಾಂಕಿನ ಅಧ್ಯಕ್ಷ ಸದಾಶಿವರೆಡ್ಡಿ ಮಾತನಾಡಿ, ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಹಲವೆಡೆ 8 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ನಾಗಲಮಡಿಕೆ ಹೋಬಳಿಯ ತಿರುಮಣಿ ಗ್ರಾಮದಲ್ಲಿ ಶಾಖೆ ಆರಂಭಿಸಲಾಗುತ್ತಿದೆ ಎಂದರು.

ಸೌರಶಕ್ತಿ ಉತ್ಪಾದನೆಯಿಂದ ರೈತರಿಗೆ ಆರ್ಥಿಕವಾಗಿ ಅನುಕೂಲವಾಗಿದ್ದು, ಹೆಚ್ಚಿನ ಸೌಲಭ್ಯ ಹಾಗೂ ಮೂಲ ಸೌಲಭ್ಯದ ಅಭಿವೃದ್ಧಿಗೆ ರೈತರ ಬೇಡಿಕೆಯಂತೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಶಿಕ್ಷಣಕ್ಕೆ, ಇತರೆ ಭದ್ರತೆ ಆಧಾರಿತ ಸಾಲ ನೀಡಲಾಗುವುದು ಎಂದರು.

ADVERTISEMENT

ಬ್ಯಾಂಕ್‌ನ ಉಪಾಧ್ಯಕ್ಷ ಚನ್ನಾರೆಡ್ಡಿ, ನಿರ್ದೇಶಕ ಎಂ.ವೆಂಕಟಸ್ವಾಮಿ, ಕೆ.ನರಸಿಂಹ, ಡಿ.ಪರಮೇಶ ನಾಯ್ಕ, ಎಂ.ಡಿ. ಪ್ರವೀಣ್ ಕುಮಾರ್, ಜಿ.ಎಂ.ಬಾಬು ರೆಡ್ಡಿ, ಸಾಂಬ ಸದಾಶಿವರೆಡ್ಡಿ, ರಾಮಾಂಜನೇಯಲು, ಜಿ. ಎನ್. ಗೋವಿಂದಪ್ಪ, ರಾಮರೆಡ್ಡಿ, ಮೈತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.