ADVERTISEMENT

ಪಾವಗಡ: ಎರಡು ದಿನದ ಅಂತರದಲ್ಲಿ ಎರಡು ಪೋಕ್ಸೊ ಪ್ರಕರಣ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 5:16 IST
Last Updated 31 ಜನವರಿ 2026, 5:16 IST
<div class="paragraphs"><p>ಬಂಧನ</p></div>

ಬಂಧನ

   

ಪಾವಗಡ: ತಾಲ್ಲೂಕಿನ ಗ್ರಾಮವೊಂದರ 3ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಅರಸೀಕೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಗ್ರಾಮವೊಂದರ ಮನು (23) ಬಂಧಿತ ಆರೋಪಿ. ಬಾಲಕಿಗೆ ಸಿಹಿ ತಿನಿಸು ಕೊಡುವುದಾಗಿ ಆರೋಪಿ ಬಾಲಕಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಚೀರಾಟ ಕೇಳಿಸಿಕೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಮತ್ತೊಂದು ಪ್ರಕರಣ: ತಾಲ್ಲೂಕಿನ ಅರಸೀಕರೆ ಪೊಲೀಸರು ಪೋಕ್ಸೊ ಪ್ರಕರಣದಡಿ ಆರೋಪಿಯನ್ನು ಬಂಧಿಸಿದ್ದಾರೆ.

8ನೇ ತರಗತಿ ವಿದ್ಯಾರ್ಥಿನಿಗೆ ತನ್ನೊಂದಿಗೆ ಮಾತನಾಡುವಂತೆ ಯುವಕ ಒತ್ತಾಯಿಸುತ್ತಿದ್ದ. ಈ ಬಗ್ಗೆ ಹಿಂದೆಯೇ ಯುವಕನಿಗೆ ಶಿಕ್ಷಕರು, ಪೋಷಕರು ಎಚ್ಚರಿಸಿದ್ದರು. ಮತ್ತೆ ಕೆಲ ದಿನಗಳ ಹಿಂದಿನಿಂದ ಯುವಕ ತನ್ನ ಚಾಳಿ ಮುಂದುವರೆಸಿದ್ದ. ವಿದ್ಯಾರ್ಥಿಗೆ ಮಾನಸಿಕ ಕಿರಿಕುಳ ನೀಡಿ, ತನ್ನೊಂದಿಗೆ ಮಾತನಾಡುವಂತೆ ಒತ್ತಡ ಹೇರುತ್ತಿದ್ದ ಬಗ್ಗೆ ಅರಸೀಕೆರೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ. ಎರಡು ದಿನಗಳ ಅಂತರದಲ್ಲಿ ಒಂದೇ ಠಾಣೆ ವ್ಯಾಪ್ತಿಯಲ್ಲಿ ಎರಡು ಪೋಕ್ಸೊ ಪ್ರಕರಣ ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.