ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ‘112’ ಪೊಲೀಸ್ ತುರ್ತು ವಾಹನ
ಕೊರಟಗೆರೆ: ತುರ್ತು ಸಮಯದಲ್ಲಿ ಸಹಾಯಕ್ಕೆ ಬೇಕಾದ ‘112’ ಪೊಲೀಸ್ ತುರ್ತು ವಾಹನ ಈಗ ಸ್ವತಃ ದೊಡ್ಡ ತುರ್ತು ಸಮಸ್ಯೆಯಾಗಿ ಮಾರ್ಪಟ್ಟಿದೆ.
ತಾಲ್ಲೂಕಿಗೆ ನೀಡಿರುವ ‘112’ ಪೊಲೀಸ್ ಜೀಪ್ ಪದೇ ಪದೇ ದಾರಿಯಲ್ಲೇ ಕೆಟ್ಟು ನಿಲ್ಲುತ್ತಿದ್ದು, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ಘಟನಾಸ್ಥಳ ತಲುಪಲಾಗದೆ ಸಿಬ್ಬಂದಿ ಪರದಾಡುವಂತಾಗಿದೆ.
ರಾತ್ರಿ ತುರ್ತು ಕರೆ ಬಂದಾಗ, ಅಲ್ಲಲ್ಲಿ ಪೊಲೀಸ್ ಜೀಪ್ ಕೆಟ್ಟು ನಿಂತ ಉದಾಹರಣೆಗಳು ಹಲವಿದೆ. ‘ರಾತ್ರಿ ಕರೆ ಬಂದಾಗ ಜೀಪ್ ಸ್ಟಾರ್ಟ್ ಆಗುತ್ತದೊ, ಇಲ್ಲವೊ ಎನ್ನುವ ಭಯ ಇರುತ್ತದೆ. ಒಂದು ಸಲ ಹೊರಟರೆ, ಎಲ್ಲಿ ಕೆಟ್ಟು ನಿಲ್ಲುತ್ತದೆ ಎಂದು ಕಾಯುವುದು ಮತ್ತೊಂದು ಚಿಂತೆ. ಕೆಟ್ಟು ನಿಂತಾಗ ಸಿಬ್ಬಂದಿಯೇ ಸಾರ್ವಜನಿಕರ ಸಹಾಯದಿಂದ ವಾಹನ ತಳ್ಳಿಸಿಕೊಂಡು ಹೋಗಬೇಕಾದ ಸನ್ನಿವೇಶ ಸಾಮಾನ್ಯವಾಗಿದೆ’ ಎನ್ನುತ್ತಾರೆ ಸಿಬ್ಬಂದಿ.
‘ಜನರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ತುರ್ತಾಗಿ ಕರೆ ಬಂದ ಸ್ಥಳಕ್ಕೆ ತಲುಪುವಾಗಲೇ ಜೀಪ್ ಒಮ್ಮೊಮ್ಮೆ ಕೈಕೊಡುತ್ತದೆ. ಇದರಿಂದ ಸಮಸ್ಯೆಯಾಗುತ್ತಲೇ ಇದೆ’ ಎಂದು ಪೊಲೀಸ್ ಸಿಬ್ಬಂದಿ
‘ಈ ವಾಹನಗಳನ್ನು ಸ್ಥಳೀಯ ವರ್ಕ್‌ಷಾಪ್‌ಗಳಲ್ಲಿ ದುರಸ್ತಿ ಮಾಡಲಾಗುತ್ತಿದೆಯೊ ತಿಳಿಯದು. ಆದರೆ ಮೆಕ್ಯಾನಿಕ್‌ಗಳು ಬಂದು ಸರಿಪಡಿಸಿದರೂ ಈ ಜೀಪ್‌ಗಳು ಸ್ಥಿರವಾಗಿ ಕೆಲಸ ಮಾಡುವುದಿಲ್ಲ’ ಎನ್ನುತ್ತಾರೆ ಸಿಬ್ಬಂದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.