ADVERTISEMENT

ನೀಡಗಲ್ ದುರ್ಗ ವೀರಭದ್ರಸ್ವಾಮಿ ದೇಗುಲದಲ್ಲಿ ಪ್ರಸಾದ ಸೇವನೆ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 22 ಮೇ 2019, 15:33 IST
Last Updated 22 ಮೇ 2019, 15:33 IST
ಪಾವಗಡ ತಾಲ್ಲೂಕು ನಿಡಗಲ್ ದುರ್ಗ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರು ಮಾಡಿದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ರೆ ಪಡೆಯುತ್ತಿದ್ದಾರೆ.
ಪಾವಗಡ ತಾಲ್ಲೂಕು ನಿಡಗಲ್ ದುರ್ಗ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರು ಮಾಡಿದ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ರೆ ಪಡೆಯುತ್ತಿದ್ದಾರೆ.   

ಪಾವಗಡ/ಶಿರಾ: ಪಾವಗಡ ತಾಲ್ಲೂಕಿನ ನಿಡಗಲ್ ದುರ್ಗದ ವೀರಭಧ್ರಸ್ವಾಮಿ ದೇಗುಲದಲ್ಲಿ ಪ್ರಸಾದ ಸೇವಿಸಿ ಬಾಲಕ ಮೃತಪಟ್ಟು, 17 ಮಂದಿ ಅಸ್ವಸ್ಥರಾಗಿದ್ದಾರೆ.

ಆಂಧ್ರ ಪ್ರದೇಶದ ಮೋರಬಾಗಿಲಿನ ವೀರಭದ್ರ (12) ಮೃತಪಟ್ಟವನು. ಸೋಮವಾರ ಹರಿಸೇವೆ ಪ್ರಯುಕ್ತ ಅಡುಗೆ ತಯಾರಿಸಿ ಪ್ರಸಾದವಾಗಿ ಸೇವಿಸಿದ್ದರು.ಮಂಗಳವಾರ ರಾತ್ರಿ
ಅಸ್ವಸ್ಥರಾದರು.

ಅವರಲ್ಲಿ 14 ಮಂದಿ ಶಿರಾ ತಾಲ್ಲೂಕು ಬರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು
ಬಳಿಕ ಶಿರಾ ಆಸ್ಪತ್ರೆಗೆ ದಾಖಲಿಸ ಲಾಗಿದ್ದರು. ಅದರಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ವೀರಭದ್ರ ಬುಧವಾರ ಮೃತಪಟ್ಟಿದ್ದಾನೆ.

ADVERTISEMENT

‘ದೇವಸ್ಥಾನಕ್ಕೆ ಹೋಗುವಾಗ ಕುಡಿಯಲು ನೀರು ತೆಗೆದುಕೊಂಡು ಹೋಗಿದ್ದೆವು. ಅಲ್ಲಿದ್ದ ಸಂಪ್‌ನ ನೀರನ್ನು ಅಡುಗೆ ತಯಾರಿಸಲು ಬಳಸಿದೆವು. ಊರಿನಿಂದ ತೆಗೆದುಕೊಂಡು ಹೋಗಿದ್ದ ನೀರು ಮುಗಿದ ಮೇಲೆ ಸಂಪಿನಲ್ಲಿದ್ದ ನೀರನ್ನು ಕೆಲವರು ಕುಡಿದಿದ್ದರು’ ಎಂದು ಗಂಗಾಧರ್ ತಿಳಿಸಿದರು.

ದೇಗುಲದ ಬಳಿ ಅಡುಗೆಗೆ ಬಳಸಿದ ನೀರಿನಿಂದ ಸಮಸ್ಯೆಯಾಗಿರ ಬಹುದು ಎಂದು ಅಸ್ವಸ್ಥಗೊಂಡಿರುವವರು ಅನುಮಾನ ವ್ಯಕ್ತಪಡಿದರು.

ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ರೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.