ADVERTISEMENT

ಹಬ್ಬದ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:14 IST
Last Updated 13 ಏಪ್ರಿಲ್ 2021, 5:14 IST
ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೇವು, ಮಾವಿನ ಸೊಪ್ಪು ಖರೀದಿಸುತ್ತಿರುವ ದೃಶ್ಯ
ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೇವು, ಮಾವಿನ ಸೊಪ್ಪು ಖರೀದಿಸುತ್ತಿರುವ ದೃಶ್ಯ   

ತಿಪಟೂರು: ಕೊರೊನಾ ಸೋಂಕಿನ ಕರಿನೆರಳಿನ ನಡುವೆಯೂ ಯುಗಾದಿ ಹಬ್ಬದ ಆಚರಣೆಗೆ ಜನತೆ ಅಗತ್ಯವಸ್ತುಗಳನ್ನು ಖರೀದಿಸುವ ಕಾರ್ಯದಲ್ಲಿ ತೊಡಗಿದ್ದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತರಕಾರಿ ಹೂ, ಹಣ್ಣು ಮಾರುಕಟ್ಟೆಯಲ್ಲಿ ಬೆಳಿಗ್ಗಿನಿಂದಲೇ ಜನರು ಯುಗಾದಿ ಹಬ್ಬದ ಅಗತ್ಯ ವಸ್ತುಗಳಾದ ಮಾವಿನ ಸೊಪ್ಪು, ಬೇವಿನ ಹೂ, ಬಾಳೆದಿಂದು ಸೇರಿದಂತೆ ಹಣ್ಣುಗಳನ್ನು ಖರೀದಿಸಿದರು. ಸರ್ಕಾರದ ಮಾರ್ಗಸೂಚಿಯ ಅನ್ವಯದಂತೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿಯೇ ಸಾಂಪ್ರದಾಯಿಕ ಆಚರಣೆ ಮಾಡಿಕೊಂಡು ಯುಗಾದಿ ಆಚರಣೆಗೆ ಸಿದ್ಧಗೊಂಡಿದ್ದಾರೆ.

ಹೆಂಗಳೆಯರು ಮನೆಯನ್ನು ಸ್ವಚ್ಛಗೊಳಿಸಿ ಸಿಂಗಾರ ಮಾಡಲುವಲ್ಲಿ ನಿರತರಾಗಿದ್ದರೆ ಮನೆಯ ಹಿರಿಯರು ಬೇವು–ಬೆಲ್ಲ ತಯಾರಿಸುವಲ್ಲಿ ಸನ್ನದ್ಧರಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷಾಚರಣೆಯ ಮೊದಲ ಹಬ್ಬವಾಗಿರುವುದರಿಂದ ವಿಜೃಂಭಣೆ ಯಿಂದ ಆಚರಣೆ ಮಾಡುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.