ತುಮಕೂರು: ರಾಜ್ಯ ಸರ್ಕಾರಿ ಎಂಜಿನಿಯರ್ಸ್ ಸಂಘ, ಕರ್ನಾಟಕ ಎಂಜಿನಿಯರಿಂಗ್ ಸರ್ವೀಸ್ ಅಸೋಸಿಯೇಷನ್‌ನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿ.ಎನ್.ರಾಧಾಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಹೊನ್ನೇಶಪ್ಪ, ಉಪಾಧ್ಯಕ್ಷರಾಗಿ ಯೋಗೀಶ್, ಕಾರ್ಯದರ್ಶಿಯಾಗಿ ರಮೇಶ್, ಜಂಟಿ ಕಾರ್ಯದರ್ಶಿಯಾಗಿ ಪ್ರಕಾಶ್, ಖಜಾಂಚಿಯಾಗಿ ದಯಾನಂದ್, ಜೆಎಸಿ ಸಂಚಾಲಕರಾಗಿ ಸಿದ್ದಪ್ಪ ಆಯ್ಕೆಯಾಗಿದ್ದಾರೆ. ನೀರಾವರಿ ಇಲಾಖೆಯ ಯೋಜನಾ ಘಟಕದ ಅಧ್ಯಕ್ಷರಾಗಿ ಗುರುಪ್ರಸಾದ್, ಉಪಾಧ್ಯಕ್ಷರಾಗಿ ತನುಜಾ, ಕಾರ್ಯದರ್ಶಿಯಾಗಿ ವಿಜಯಪ್ರಸಾದ್, ಜಂಟಿ ಕಾರ್ಯದರ್ಶಿಯಾಗಿ ಸಂತೋಷ್, ಖಜಾಂಚಿಯಾಗಿ ಸರ್ಪಭೂಷಣ್, ಜೆಎಸಿ ಸಂಚಾಲಕಿಯಾಗಿ ಸೌಮ್ಯಾ ಅವಿರೋಧ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.