
ಕುಣಿಗಲ್: ತಾಲ್ಲೂಕಿನ ಮಲ್ಲಾಘಟ್ಟದ ಇಬ್ಬರಿಗೆ ರೈಲ್ವೆ ಇಲಾಖೆ ಭೂಸ್ವಾಧೀನ ಪರಿಹಾರ ನೀಡದ ಕಾರಣ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಲಯದ ಅಮಿನ್‌ಗಳು ಗುರುವಾರ ಕುಣಿಗಲ್ ರೈಲ್ವೆ ನಿಲ್ದಾಣದಲ್ಲಿ ಚರಾಸ್ತಿಗಳನ್ನು ಜಪ್ತಿ ಮಾಡಿದರು.
ಮಲ್ಲಾಘಟ್ಟ ನಿವಾಸಿ ಲೆಂಕಯ್ಯ ಮತ್ತು ಮೂಡಲಗಿರಿ ಇಬ್ಬರೂ 90 ವರ್ಷದವರಾಗಿದ್ದಾರೆ. ಇವರಿಗೆ ಸೇರಿದ ಮನೆ ಮತ್ತು ಜಮೀನನ್ನು ರೈಲ್ವೆ ಇಲಾಖೆ ಭೂಸ್ವಾಧೀನ ಪಡಿಸಿಕೊಂಡಿತ್ತು. ಪರಿಹಾರ ₹20 ಲಕ್ಷ ನೀಡದ ಕಾರಣ ನ್ಯಾಯಾಲಯದ ಮೊರೆಹೋಗಿದ್ದರು. 2020ರಲ್ಲಿ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿದ್ದರೂ ರೈಲ್ವೆ ಇಲಾಖೆ ಅಧಿಕಾರಿಗಳು ಗಮನಹರಿಸದ ಕಾರಣ ಚರಾಸ್ತಿಗಳ ಜಪ್ತಿಗೆ ಆದೇಶವಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಪರಿಹಾರ ಧನ ನೀಡುವಲ್ಲಿ ವಿಫಲರಾದ ಕಾರಣ ಚರಾಸ್ತಿಗಳನ್ನು ಜಪ್ತಿಮಾಡಲಾಗಿದೆ ಎಂದು ಅಮೀನರಾದ ಕಲ್ಪನಾ, ಮಹೇಶ ತಿಳಿಸಿದ್ದಾರೆ.
ನ್ಯಾಯಾಲಯದ ಸಿಬ್ಬಂದಿಗಳು ಮನೆ ಮಾಲೀಕ ಲೆಂಕಯ್ಯ, ಮೂಡುಗಿರಿ ಮತ್ತು ವಕೀಲರ ಜತೆಗೆ ಜಪ್ತಿಗೆ ಬಂದ ಸಮಯದಲ್ಲಿ ರೈಲ್ವೆ ನಿಲ್ದಾಣದ ಮಾಸ್ಟರ್ ಸೇರಿದಂತೆ ಸಿಬ್ಬಂದಿ ವಿಚಲಿತರಾದರು. ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದಾಗ ಸಮಯಾವಕಾಶ ಕೋರಿದ್ದು. ನ್ಯಾಯಾಲಯ ಸಿಬ್ಬಂದಿ ಈಗಾಗಲೇ ಸಮಯಾವಕಾಶ ನೀಡಲಾಗಿದೆ ಎಂದು ತಿಳಿಸಿ ಜಪ್ತಿ ಮುಂದುವರೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.