ADVERTISEMENT

ತುಮಕೂರು: ಮಳೆಗೆ ಕರಬೂಜ ಜಲಾವೃತ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 17:35 IST
Last Updated 29 ಏಪ್ರಿಲ್ 2020, 17:35 IST
ಪಾವಗಡ ತಾಲ್ಲೂಕು ಕೊಡಮಡುಗು ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಬಿದ್ದ ಮಳೆಗೆ ನಾಗರಾಜು ಅವರ ಜಮೀನಿನಲ್ಲಿ ಬೆಳೆದಿದ್ದ ಕರಬೂಜ ಬೆಳೆ ಜಲಾವೃತವಾಗಿದೆ
ಪಾವಗಡ ತಾಲ್ಲೂಕು ಕೊಡಮಡುಗು ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಬಿದ್ದ ಮಳೆಗೆ ನಾಗರಾಜು ಅವರ ಜಮೀನಿನಲ್ಲಿ ಬೆಳೆದಿದ್ದ ಕರಬೂಜ ಬೆಳೆ ಜಲಾವೃತವಾಗಿದೆ   

ಪಾವಗಡ: ತಾಲ್ಲೂಕಿನ ಹಲವೆಡೆ ಬುಧವಾರ ಮಳೆಯಾಗಿದೆ. ‌

ಅರಳೀಕುಂಟೆಯ ಈರಕ್ಕ, ಕೊಡಮಡುಗು ಗ್ರಾಮದ ನಾಗರಾಜು, ನಿಂಗಮ್ಮ ಎಂಬುವರ ತಲಾ 3 ಎಕರೆ ಕರಬೂಜ ಜಲಾವೃತಗೊಂಡಿದೆ.

ಅರಳೀಕುಂಟೆ ಗ್ರಾಮದಲ್ಲಿ ಹಳ್ಳ ಹರಿದು ಕೆರೆಗೆ ನೀರು ಬಂದಿದೆ.

ADVERTISEMENT

ನಾಗಲಮಡಿಕೆ ಹೋಬಳಿ, ಪಟ್ಟಣ ಸೇರಿದಂತೆ ಕಸಬಾ ಹೋಬಳಿಯಲ್ಲಿಯೂ ಉತ್ತಮ ಮಳೆಯಾಗಿದೆ. ಕಟ್ಟೆ, ಕುಂಟೆಗಳು ನೀರಿನಿಂದ ತುಂಬಿ ಕಂಗೊಳಿಸುತ್ತಿವೆ.

‘ಭರಣಿ ಮಳೆಯಿಂದ ಧರಣಿ ಹಸಿರಾಗುತ್ತದೆ’ ಎಂಬ ನಾಣ್ಣುಡಿಯಂತೆ ರೈತರು ಜಮೀನುಗಳನ್ನು ಹಸನು ಮಡಿಕೊಳ್ಳಲು ಸಿದ್ದತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.