ADVERTISEMENT

ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರೆ ಹೆಣ ಬೀಳುತಿತ್ತು: ಜಗ್ಗೇಶ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 13:25 IST
Last Updated 23 ಆಗಸ್ಟ್ 2022, 13:25 IST
ಜಗ್ಗೇಶ್
ಜಗ್ಗೇಶ್   

ತುಮಕೂರು: ಕೊಡಗಿನಲ್ಲಿ ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದರೆ ಅಲ್ಲಿ ಹೆಣ ಬೀಳುತಿತ್ತು. ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೊಡಗಿನಲ್ಲಿ ಈವರೆಗೆ ಎಷ್ಟೊ ಕೊಲೆಗಳು ನಡೆದಿವೆ. ಕೇರಳ ಗಡಿದಾಟಿ ಬಂದು ಕೊಲೆ ಮಾಡುತ್ತಾರೆ. ಅಹಿತಕರ ಘಟನೆಗಳು ನಡೆಯಲು ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ಕಾಂಗ್ರೆಸಿಗರ ಪ್ರತಿಭಟನೆಗೆ ಅವಕಾಶ ನೀಡಿಲ್ಲ’ ಎಂದು ಸಮರ್ಥಿಸಿಕೊಂಡರು.

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಯಾವುದೋ ವಿಚಾರಕ್ಕೆ ಬೇಸರಗೊಂಡು ಮೊಟ್ಟೆ ಎಸೆದಿರಬಹುದು. ಈ ವಿಚಾರ ಜಗಜ್ಜಾಹೀರಾಗಿದೆ. ಆತನ ಸಂದೇಶಗಳನ್ನು ನೋಡಿದ್ದು, ಮೊದಲು ಜೆಡಿಎಸ್‌ನಲ್ಲಿ ಇದ್ದು, ನಂತರ ಕಾಂಗ್ರೆಸ್‌ಗೆ ಬಂದಿದ್ದಾನೆ. ಈಗ ಬಂಧನವೂ ಆಗಿದೆ. ಆದರೂ ಕಾಂಗ್ರೆಸ್‌ನವರು ಹೋರಾಟ ಮಾಡಬೇಕು ಎನ್ನುತ್ತಿದ್ದಾರೆ’ ಎಂದರು.

ADVERTISEMENT

ಕಾಂಗ್ರೆಸ್‌ನವರ ಹೋರಾಟ ಮುಂದಿನ ಜೂನ್‌ವರೆಗೂ (ವಿಧಾನಸಭೆ ಚುನಾವಣೆ) ಇರಬಹುದು. ಆ ಮೇಲೆ ಅವರೇ ತಣ್ಣಗಾಗುತ್ತಾರೆ. ಪ್ರತಿಯೊಬ್ಬರೂ ಆ ಜಾಗ (ವಿಧಾನಸೌಧ) ಹಿಡಿಯಲು ಮುಂದಾಗಿದ್ದಾರೆ. ಕಾಂಗ್ರೆಸ್‌ನವರಿಗೆ ವಿಷಯಗಳಿಲ್ಲ. ವಿಷಯಗಳು ಇದ್ದರೆ ಅದ್ಭುತ ಚರ್ಚೆ ನಡೆಯುತ್ತಿತ್ತು. ಹಾಗಾಗಿ ಕೇವಲ ಮೊಟ್ಟೆ ವಿಚಾರವೇ ಚರ್ಚೆಯಾಗುತ್ತಿದೆ. ಇದೊಂದು ವಿಚಾರವೇ ಅಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.