ADVERTISEMENT

ರಾಮ ಮಂದಿರ ಶಿಲಾನ್ಯಾಸ: ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 7:52 IST
Last Updated 6 ಆಗಸ್ಟ್ 2020, 7:52 IST
ಮಧುಗಿರಿ ತಾಲ್ಲೂಕು ವಿಶ್ವಹಿಂದೂ ಪರಿಷತ್ ಮತ್ತು ರಾಷ್ಟ್ರ ಸೇವಿಕಾ ಸಮಿತಿ ಆಶ್ರಯದಲ್ಲಿ ಕೋಟೆ ಕೋದಂಡರಾಮ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು
ಮಧುಗಿರಿ ತಾಲ್ಲೂಕು ವಿಶ್ವಹಿಂದೂ ಪರಿಷತ್ ಮತ್ತು ರಾಷ್ಟ್ರ ಸೇವಿಕಾ ಸಮಿತಿ ಆಶ್ರಯದಲ್ಲಿ ಕೋಟೆ ಕೋದಂಡರಾಮ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು   

ಮಧುಗಿರಿ: ಐದು ದಶಕಗಳ ತಪಸ್ಸು ಮತ್ತು ಕೋಟ್ಯಂತರ ಜನರ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿರುವುದು ಹೆಮ್ಮೆ ಮತ್ತು ಸಂಭ್ರಮದ ವಿಷಯವಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಕೋಟೆ ಕೋದಂಡರಾಮ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ರಾಷ್ಟ್ರಸೇವಿಕಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

‘ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ದೇಶದ ಚಿತ್ರಣವೇ ಬದಲಾಗಿದೆ. ಭಾರತ ವಿಶ್ವಗುರು ಆಗಬೇಕೆಂಬ ಕನಸು ಮೋದಿ ಅವರ ಆಡಳಿತದಲ್ಲಿ ಸಾಕಾರವಾಗಲಿದೆ’ ಎಂದರು.

ADVERTISEMENT

ವಿಶ್ವ ಹಿಂದೂ ಪರಿಷತ್ ಸಂಚಾಲಕ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ಧಾರ್ಮಿಕ ಮುಂಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಬಿಜೆಪಿ ಮುಖಂಡರದ ರಾಮಚಂದ್ರಪ್ಪ, ಆದಿಶೇಷಗುಪ್ತ, ಉದ್ಯಮಿ ಚಿಕ್ಕನರಸೇಗೌಡ, ಲಕ್ಷೇಶ, ಕಲ್ಪನಾ ಗೋವಿಂದರಾಜು, ಶಾರದಾ ರಾಮಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.