ADVERTISEMENT

ರಾಮಾಯಣದಿಂದ ರಾಮ ರಾಜ್ಯ ಕಲ್ಪನೆ: ತಹಶೀಲ್ದಾರ್‌ ವೈ.ರವಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:54 IST
Last Updated 8 ಅಕ್ಟೋಬರ್ 2025, 7:54 IST
ಪಾವಗಡದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು
ಪಾವಗಡದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು   

ಪಾವಗಡ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್‌ ವೈ.ರವಿ ಮಾತನಾಡಿ, ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿರುವ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯನಿರ್ವಹಣಾಧಿಕಾರಿ ಉತ್ತಮ್‌ ಮಾತನಾಡಿ, ರಾಮಾಯಣದಲ್ಲಿ 24,000‌ ಶ್ಲೋಕಗಳನ್ನು ರಚಿಸಿ ಸಮಾನತೆ, ಭ್ರಾತೃತ್ವ, ತ್ಯಾಗದ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್‌ ಲೋಕೇಶ್‌, ಗಾಂಧೀಜಿಗೆ ರಾಮರಾಜ್ಯ ಪರಿಕಲ್ಪನೆ ಸಿಕ್ಕಿದ್ದೇ ವಾಲ್ಮೀಕಿ ರಾಮಾಯಣದಿಂದ. ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮುದಾಯ ಸೇರಿಸಲು ಹೊರಟಿರುವುದನ್ನು ವಿರೋಧಿಸಲಾಗುತ್ತದೆ. ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಲ್ಲಿ ಹೆಚ್ಚುವರಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಕುಮಾರಸ್ವಾಮಿ ಬಡಾವಣೆ ವಾಲ್ಮೀಕಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು.

ಪ್ರದ್ಯಾಪಕ ಕೆ.ಒ. ಮಾರಪ್ಪ, ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ್‌, ಮುಖ್ಯಾಧಿಕಾರಿ ಜಾಫರ್‌ ಷರೀಫ್‌, ಪರಿಶಿಷ್ಟ ಪಂಗಡ ಇಲಾಖೆ ಕಲ್ಯಾಣಾಧಿಕಾರಿ ಯತೀಶ್‌, ಪುರಸಭೆ ಅಧ್ಯಕ್ಷ ಸುದೇಶ್ ಬಾಬು, ಬ್ಯಾಡನೂರು ಶಿವು, ಓಂಕಾರನಾಯಕ, ರಂಗಮ್ಮ, ಅಂಬಿಕಾ, ನರಸಿಂಹಕೃಷ್ಣ, ಬೇಕರಿ ನಾಗರಾಜು, ಗುಟ್ಟಳ್ಳಿ ಅಂಜಪ್ಪ, ನರಸಿಂಹಮೂರ್ತಿ, ಈರಣ್ಣ, ಶಿವಪ್ಪ, ಸತೀಶ್‌, ಮಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.