ADVERTISEMENT

ನೇಕಾರ ರಮೇಶ್‌ ನೇಯ್ಗೆ ಮಾಡಿದ ರತ್ನಗಂಬಳಿ ರಾಜ್ಯ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 4:25 IST
Last Updated 6 ಆಗಸ್ಟ್ 2021, 4:25 IST
ನೇಕಾರ ರಮೇಶ್‌
ನೇಕಾರ ರಮೇಶ್‌   

ತುಮಕೂರು: ಚಿಕ್ಕನಾಯಕನಹಳ್ಳಿ ಪಟ್ಟಣದ ಕೈಮಗ್ಗ ನೇಕಾರ ರಮೇಶ್ ಅವರು ನೇಯ್ಗೆ ಮಾಡಿರುವ ರತ್ನಗಂಬಳಿಯನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಕೈಮಗ್ಗ ನೇಕಾರರ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡುವ ಸಲುವಾಗಿ ಉಣ್ಣೆ ಕ್ಷೇತ್ರದಲ್ಲಿ ರಮೇಶ್ ಅವರು ಹೊಂದಿರುವ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ ಹಾಗೂಉತ್ಕೃಷ್ಟತೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹15 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಆ. 7ರಂದು ವಿಕಾಸಸೌಧ, ಕೊಠಡಿ ಸಂಖ್ಯೆ 419ರ ಸಭಾಂಗಣದಲ್ಲಿ ನಡೆಯಲಿರುವ 7ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೈಮಗ್ಗ ಜವಳಿ ಇಲಾಖೆ ಉಪನಿರ್ದೇಶಕಿ ಡಿ.ಸುಮಲತಾ ತಿಳಿಸಿದ್ದಾರೆ.

ADVERTISEMENT

ರಮೇಶ್‌ ಅವರು ಉತ್ಪಾದಿಸಿದ ಅಪ್ಪಟ ರತ್ನಗಂಬಳಿಯು 6X4 ಅಡಿ ಅಳತೆ, ಸುಮಾರು 7 ಕೆ.ಜಿ ತೂಕ ಹೊಂದಿದ್ದು, ಇದರ ಬೆಲೆ ₹ 5 ಸಾವಿರ. ಈ ರತ್ನಗಂಬಳಿಯನ್ನು ನೆಲಹಾಸಾಗಿ ಉಪಯೋಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.