ADVERTISEMENT

ಮಧುಗಿರಿ | ಅಜಾಗರೂಕತೆಯ ಚಾಲನೆ: ಆರು ತಿಂಗಳು ಜೈಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 14:10 IST
Last Updated 21 ಮಾರ್ಚ್ 2025, 14:10 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಮಧುಗಿರಿ: ಟಿಪ್ಪರ್ ಲಾರಿಯನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಬೆಸ್ಕಾಂ ಇಲಾಖೆಯ ವಿದ್ಯುತ್ ತಂತಿ ಹಾಗೂ ಶಾಲೆಗೂ ಹಾನಿ ಮಾಡಿದ್ದ ಆರೋಪಿಗೆ ಆರು ತಿಂಗಳು ಶಿಕ್ಷೆ ಮತ್ತು ₹12 ಸಾವಿರ ದಂಡ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

2015ರ ಸೆಪ್ಟೆಂಬರ್ 23ರಂದು ಪಟ್ಟಣದ ಗೌರಿಬಿದನೂರು ರಸ್ತೆಯ ಚಿರೆಕ್ ಪಬ್ಲಿಕ್ ಶಾಲೆ ಮುಂಭಾಗದ ವಿದ್ಯುತ್ ಕಂಬಕ್ಕೆ ಟಿಪ್ಪರ್ ಲಾರಿ ವಿದ್ಯುತ್ ತಂತಿಯನ್ನು ಐದು ಮೀಟರ್‌ವರೆಗೆ ಎಳೆದುಕೊಂಡು ವಿದ್ಯುತ್ ಕಂಬ ಹಾಗೂ ಉಪಕರಣಗಳು ನಾಶವಾಗಿದ್ದವು. ಇದರಿಂದ ಬೆಸ್ಕಾಂ ಇಲಾಖೆಗೆ ₹2.16 ಲಕ್ಷ ಹಾಗೂ ಚಿರೆಕ್ ಶಾಲೆಗೆ ನಷ್ಟವಾಗಿತ್ತು. ಇದಲ್ಲದೆ ಅಪಘಾತ ಮಾಡಿ ಪರಾರಿಯಾಗಿದ್ದರು.

ADVERTISEMENT

ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ.ಎನ್. ಅಮರನಾಥ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಈ. ರಮೇಶ್ ಸರ್ಕಾರದ ಪರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.