ತಿಪಟೂರು: ಕಳೆದ ಹಲವಾರು ವರ್ಷಗಳಿಂದ ಹಾಲ್ಕುರಿಕೆ ಭಾಗದ ರೈತರು ಕೆರೆಯಲ್ಲಿ ನೀರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ಶಾಸಕರು ನೀಡಿದ ಭರವಸೆಯಂತೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ಶಾಂತಕುಮಾರ್ ನೇತೃತ್ವದಲ್ಲಿ ಗ್ರಾಮಸ್ಥರು ಪಾದಯಾತ್ರೆ ನಡೆಸಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಶಾಂತಕುಮಾರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಹಾಲ್ಕುರಿಕೆ ಕೆರೆಗೆ ನೀರು ಹರಿಸುವ ಭರವಸೆ ನೀಡುತ್ತಾ ಬಂದಿದ್ದು ಇಲ್ಲಿಯವರೆವಿಗೂ ಈಡೇರಿಸುವ ಕೆಲಸವಾಗಿಲ್ಲ. ಇಲ್ಲಿನ ಜನರು ಕೇವಲ ಮಳೆ ನೀರನ್ನೇ ಆಶ್ರಯಿಸಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಮುಖಂಡ ಮಾಗೇನಹಳ್ಳಿ ಶಂಕರ್ ಮಾತನಾಡಿದರು.
ಮುಖಂಡರಾದ ರಮೇಶ್, ಕೊಡಗೀಹಳ್ಳಿ ಬಸವರಾಜು, ಚೇತನ್, ಉಮೇಶ್ ಗೌಡ, ಸಂಪತ್ತು, ರಾಜು, ದಿನೇಶ್ ಬಾಬು, ಗೊರಗೊಂಡನಹಳ್ಳಿ ಸುದರ್ಶನ್, ಮೋಹನ್ ಬಾಬು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.