ತುಮಕೂರು: ಪೋಲಿಯೊ ರೋಗ ನಿವಾರಣೆ ಮಾಡುವಲ್ಲಿ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಮಹದೇವ ಪ್ರಸಾದ್ ಹೇಳಿದರು.
ನಗರದಲ್ಲಿ ಈಚೆಗೆ ರೋಟರಿ ತುಮಕೂರು ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಶೇ 99ರಷ್ಟು ಪೋಲಿಯೊ ರೋಗ ವಾಸಿಯಾಗಿದ್ದು, ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಸ್ವಲ್ಪ ಉಳಿದುಕೊಂಡಿದೆ ಎಂದರು.
ರೋಟರಿ ವತಿಯಿಂದ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದ್ದು, ವಿಶೇಷವಾಗಿ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಈವರೆಗೂ 12 ಸಾವಿರ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿಸಲಾಗಿದೆ ಎಂದು ಹೇಳಿದರು.
ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಅವರಿಗೆ ‘ಇಂಡಿಯಾ ಇನ್‍ಸ್ಪೈರ್ ಅವಾರ್ಡ್’ ನೀಡಿ ಗೌರವಿಸಲಾಯಿತು.
ರೋಟರಿ ಪದಾಧಿಕಾರಿಗಳಾದ ನಾಗಮಣಿ ಪ್ರಭಾಕರ್, ಜಿ.ಆರ್.ನಾಗರಾಜ್, ಎನ್.ಸಿ.ಉಮೇಶ್, ಪ್ರಮೀಳ, ಬಿಳಿಗೆರೆ ಶಿವಕುಮಾರ್, ಜಿ.ಎನ್.ಜನಾರ್ಧನ್, ಚಂದ್ರಿಕಾ ಶಿವಕುಮಾರ್, ಶಿವಶಂಕರ ಕಾಡದೇವರಮಠ, ಲಕ್ಕಪ್ಪ, ಶಿವಣ್ಣ ಮಲ್ಲಸಂದ್ರ, ಸದಾಶಿವಯ್ಯ, ನಾಗೇಶ್ ಕುಮಾರ್, ಎಂ.ಎಸ್.ಪ್ರಕಾಶ್, ಜಿ.ಎನ್.ಮಹೇಶ್, ಸಿ.ನಾಗರಾಜ್, ಕೀರ್ತಿಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.