ಸಾಂದರ್ಭಿಕ ಚಿತ್ರ
ಮಧುಗಿರಿ: ತಾಲ್ಲೂಕಿನ ಚಿನಕವಜ್ರ ಚೆಕ್ ಪೋಸ್ಟ್ ಬಳಿ ಶನಿವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 4.80 ಲಕ್ಷ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚೆಕ್ ಪೋಸ್ಟ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಇಂಡಿಯಾ ಎಟಿಎಂ ಸಂಸ್ಥೆಗೆ ಸೇರಿದ ವಾಹನದಲ್ಲಿ ಹಣ ಪತ್ತೆಯಾಗಿದೆ. ತುಮಕೂರಿನ ಇಂಡಿಯಾ ಖಾಸಗಿ ಬ್ಯಾಂಕ್ ನ ಆರ್.ಚೇತನ್ ಮತ್ತು ಎಚ್.ಎಸ್.ರಕ್ಷಿತ್ ಅವರನ್ನು ಮಧುಗಿರಿ ಪಟ್ಟಣ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.