ತುಮಕೂರು: ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್ ಅವರಿಗೆ ಅಪರಿಚಿತರು ಲೋಕಾಯುಕ್ತ ಎಸ್.ಪಿ ಹೆಸರಿನಲ್ಲಿ ಕರೆ ಮಾಡಿ ಹಣ ವಸೂಲಿಗೆ ಯತ್ನಿಸಿದ್ದಾರೆ.
ಈಚೆಗೆ ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಿ, ‘ನಾನು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮಾತನಾಡುತ್ತಿದ್ದೇನೆ. ಇನ್ನು 10 ನಿಮಿಷದ ಬಳಿಕ ನಮ್ಮ ಎಡಿಜಿಪಿ ಮಾತನಾಡುತ್ತಾರೆ. ನಿಮ್ಮ ಕಚೇರಿ ಮೇಲೆ ದಾಳಿ ಮಾಡಲು ಫೈಲ್ ಸಿದ್ಧವಾಗಿದೆ. ₹1 ಲಕ್ಷ ವರ್ಗಾವಣೆ ಮಾಡಿದರೆ ದಾಳಿ ನಿಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ. ನಂತರ ಪ್ರಸಾದ್ ಕರೆ ಕಟ್ ಮಾಡಿದ್ದಾರೆ.
ಈ ಕುರಿತು ಪ್ರಸಾದ್ ನೀಡಿದ ದೂರಿನ ಮೇರೆಗೆ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಸರ್ಕಾರಿ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟು ವಂಚಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ’ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.